Webdunia - Bharat's app for daily news and videos

Install App

ಮತ್ತೆ ಮಿಂಚಿದ ಕೊಹ್ಲಿ ಅರ್ಧಶತಕ: ಪ್ಲೇ ಆಫ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್

Webdunia
ಸೋಮವಾರ, 23 ಮೇ 2016 (11:43 IST)
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯ್‌‍ಪುರದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಜಯಗಳಿಸುವ ಮೂಲಕ ಪ್ಲೇಆಫ್ ಕನಸು ನನಸಾಗಿದೆ. ವಿರಾಟ್ ಕೊಹ್ಲಿ ಅವರ ಶ್ರಮದ ಫಲವಾಗಿ 54 ರನ್ ಜವಾಬ್ದಾರಿ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
 
 
ಆರ್‌ಸಿಬಿ ಬೌಲರುಗಳ ಪ್ರಯತ್ನವನ್ನೂ ನಾವು ಕಡೆಗಣಿಸಲಾವುದಿಲ್ಲ. ಆರ್‌ಸಿಬಿ ಬೌಲರುಗಳು ಡೇರ್ ಡೆವಿಲ್ಸ್ ತಂಡವನ್ನು 138ರ ಸಾಧಾರಣ ಮೊತ್ತಕ್ಕೆ ಔಟ್ ಮಾಡಿತು.  ಯಜುವೇಂದ್ರ ಚಾಹಲ್ 32 ರನ್‌ಗೆ 3 ವಿಕೆಟ್‌ ಕಬಳಿಸಿದರು ಮತ್ತು ಕ್ರಿಸ್ ಗೇಲ್ 2 ವಿಕೆಟ್‌ಗೆ 11 ರನ್ ನೀಡಿದರು.
 ಡೇರ್ ಡೇವಿಲ್ಸ್ ಪರ ಕ್ವಿಂಟನ್ ಡಿ ಕಾಕ್ ಹೋರಾಟ 60 ರನ್ ಸಿಡಿಸಿದರೂ ಇತರೆ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತಿಣುಕಾಡಿದರು.ಆರ್‌ಸಿಬಿ ಬುದ್ಧಿವಂತಿಕೆಯ ಬೌಲಿಂಗ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು ಮತ್ತು ಗುರಿಯನ್ನು 11 ರನ್ ಬಾಕಿವುಳಿದಿರುವಾಗಲೇ ಬೆನ್ನಟ್ಟಿತು. ಕೊಹ್ಲಿ ಅಜೇಯ 54 ರನ್ ನೆರವಿನಿಂದ ಗೆಲುವನ್ನು ತಂದಿತ್ತರು.
 
 ಆರ್‌ಸಿಬಿ ಆರಂಭದಲ್ಲೇ ಕ್ರಿಸ್ ಗೇಲ್(1) ಮತ್ತು ಡಿ ವಿಲಿಯರ್ಸ್(6) ವಿಕೆಟ್ ಕಳೆದುಕೊಂಡಿತು. ಮಾರಿಸ್ ಮತ್ತು ಜಹೀರ್ ಖಾನ್ ಅವರ ನಿಖರ, ವೇಗದ ದಾಳಿಯನ್ನು  ಕೊಹ್ಲಿ ಮತ್ತು ರಾಹುಲ್ ಎದುರಿಸಿದರು. ರಾಹುಲ್ ಅವರ 23 ಎಸೆತಗಳಲ್ಲಿ 38 ರನ್ ಕೊಹ್ಲಿಯ ಒತ್ತಡವನ್ನು ತಗ್ಗಿಸಿತು. ಮೂರನೇ ವಿಕೆಟ್‌ಗೆ 66 ರನ್ ಅವರು ಸೇರಿಸಿದರು.
 
 ಕೊಹ್ಲಿ ಸ್ಟುವರ್ಟ್ ಬಿನ್ನಿ ಜತೆಯಾಟದೊಂದಿಗೆ ಆರ್‌ಸಿಬಿಯನ್ನು ಗೆಲುವಿನ ದಡ ಮುಟ್ಟಿಸಿದರು. ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದು, ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್‌ನಲ್ಲಿ ಆಡಲಿದೆ.
 
 ಮೂರನೇ ಸ್ಥಾನ ಪಡೆದ ಸನ್‌ರೈಸರ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಬುಧವಾರ ಆಡಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಸೋತರೂ ಕೂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಆಡುವ ಅವಕಾಶವಿರುತ್ತದೆ. 
ಸ್ಕೋರ್ ವಿವರ
ಡೆಲ್ಲಿ ಡೇರ್‌ಡೆವಿಲ್ಸ್ 8 ಕ್ಕೆ 138
 
ಕ್ವಿಂಟನ್ ಡಿ ಕಾಕ್ ಸಿ ಕ್ರಿಸ್ ಜೋರ್ಡಾನ್ ಬಿ ಯಜುವೇಂದ್ರ ಚಾಹಲ್  60
ರಿಷಭ್ ಪಂತ್ ಸಿ ರಾಹುಲ್ ಬಿ ಅರವಿಂದ್  01
ಕರುಣ್ ನಾಯರ್ ಸಿ ವಿರಾಟ್ ಕೊಹ್ಲಿ ಬಿ ಯಜುವೇಂದ್ರ ಚಾಹಲ್  11
ಸಂಜು ಸ್ಯಾಮ್ಸನ್ ಸಿ ರಾಹುಲ್ ಬಿ ಯಜುವೇಂದ್ರ ಚಾಹಲ್  17
ಸ್ಯಾಮ್ ಬಿಲ್ಲಿಂಗ್ಸ್ ಸಿ ಕ್ರಿಸ್ ಗೇಲ್ ಬಿ ಕ್ರಿಸ್ ಜೋರ್ಡನ್  04
ಪವನ್ ನೇಗಿ ಸಿ ಡಿವಿಲಿಯರ್ಸ್ ಬಿ ಕ್ರಿಸ್ ಗೇಲ್  06
ಕಾರ್ಲೋಸ್ ಬ್ರಾಥ್‌ವೈಟ್ ಸಿ ಶೇನ್ ವ್ಯಾಟ್ಸನ್ ಬಿ  ಗೇಲ್  01
ಕ್ರಿಸ್ ಮೊರಿಸ್ ಔಟಾಗದೆ  27
ಜಯಂತ್ ಯಾದವ್ ರನ್‌ಔಟ್ (ಚಾಹಲ್/ರಾಹುಲ್)  05
ಇತರೆ:   06
ವಿಕೆಟ್‌ ಪತನ: 1–11 (ರಿಷಬ್ ಪಂತ್; 1.2), 2–42 (ನಾಯರ್; 5.3), 3–71 (ಸ್ಯಾಮ್ಸನ್; 9.3), 4–81 (ಬಿಲ್ಲಿಂಗ್ಸ್; 11.2). 5–96 (ನೇಗಿ, 14.3), 6–98 (ಬ್ರಾಥ್‌ವೈಟ್, 14.6), 7–107 (ಕ್ವಿಂಟನ್ ಡಿಕಾಕ್, 16.1), 8–138 (ಜಯಂತ್ ಯಾದವ್, 20).
ಬೌಲಿಂಗ್‌: ಸ್ಟುವರ್ಟ್ ಬಿನ್ನಿ 2–0–15–0 , ಎಸ್. ಅರವಿಂದ್ 4–0–28–1, ಕ್ರಿಸ್ ಜೋರ್ಡಾನ್ 2–0–10–1, ಶೇನ್ ವ್ಯಾಟ್ಸನ್ 4–0–27–0, ಯಜುವೇಂದ್ರ ಚಹಲ್ 4–0–32–3 , ಇಕ್ಬಾಲ್ ಅಬ್ದುಲ್ಲಾ 2–0–14–0, ಕ್ರಿಸ್ ಗೇಲ್ 2–0–11–2 
 
ಆರ್‌ಸಿಬಿ  4 ಕ್ಕೆ 139  (18.1 ಓವರ್‌ಗಳಲ್ಲಿ)
 
ಕ್ರಿಸ್‌ ಗೇಲ್‌ ಬಿ ಕ್ರಿಸ್‌ ಮೊರಿಸ್‌  01
ವಿರಾಟ್‌ ಕೊಹ್ಲಿ ಔಟಾಗದೆ  54
ಎಬಿ ಡಿವಿಲಿಯರ್ಸ್‌ ಸಿ ಜಯಂತ್‌ ಯಾದವ್‌ ಬಿ ಜಹೀರ್‌   06
ಕೆ.ಎಲ್‌.ರಾಹುಲ್‌ ಬಿ  ಬ್ರಾಥ್‌ವೈಟ್‌  38
ಶೇನ್‌ ವ್ಯಾಟ್ಸನ್‌ ಸಿ ಸ್ಯಾಮ್‌ ಬಿಲ್ಲಿಂಗ್ಸ್‌ ಬಿ ನೇಗಿ  14
ಸ್ಟುವರ್ಟ್‌ ಬಿನ್ನಿ ಔಟಾಗದೆ  16
ಇತರೆ: 10
ವಿಕೆಟ್‌ ಪತನ:   1–5 (ಗೇಲ್, 1.1), 2–17 (ಡಿವಿಲಿಯರ್ಸ್, 2.4), 3–83 (ರಾಹುಲ್,10.1), 4–111 (ವ್ಯಾಟ್ಸನ್,14.6).
ಬೌಲಿಂಗ್‌: ಜಹೀರ್‌ ಖಾನ್‌ 4–0–30–1, ಮೊರಿಸ್‌ 3–0–31–1, ನೇಗಿ 3–0–19–1, ಅಮಿತ್‌ ಮಿಶ್ರಾ 4–0–33–0, ಜಯಂತ್‌ ಯಾದವ್‌ 1–0–8–0, ಕಾರ್ಲೊಸ್‌ ಬ್ರಾಥ್‌ವೈಟ್‌ 3.1–0–18–1.
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 6 ವಿಕೆಟ್‌‌ಗಳಿಂದ ಜಯ. ಪ್ಲೇಆಫ್ ಹಂತಕ್ಕೆ ಪ್ರವೇಶ.  ಡೆಲ್ಲಿ ಡೇರ್ ಡೆವಿಲ್ಸ್‌ಗೆ ಪ್ಲೇಆಫ್‌ ಪ್ರವೇಶವಿಲ್ಲ.

ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
 
< > ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ< >
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments