Select Your Language

Notifications

webdunia
webdunia
webdunia
webdunia

ಸೆಹ್ವಾಗ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಬಲಿಯಾದ ಚೆನ್ನೈ ಸೂಪರ್ ಕಿಂಗ್ಸ್

ಸೆಹ್ವಾಗ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಬಲಿಯಾದ ಚೆನ್ನೈ ಸೂಪರ್ ಕಿಂಗ್ಸ್
ಮುಂಬೈ , ಶನಿವಾರ, 31 ಮೇ 2014 (12:45 IST)
ವಾಂಖೆಡೆ ಅಂಗಳದಲ್ಲಿ ಸುನಾಮಿಯಂತೆ ದಾಳಿ ಮಾಡಿದ ವೀರೇಂದ್ರ ಸೆಹ್ವಾಗ್ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಬೌಂಡರಿ, ಸಿಕ್ಸರುಗಳ ಸುರಿಮಳೆ ಸುರಿಸಿದ ಸೆಹ್ವಾಗ್ ಭರ್ಜರಿ ಶತಕ ಸಿಡಿಸಿದರು. ಸೆಹ್ವಾಗ್ ಭರ್ಜರಿ ಆಟದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಎರಡನೇ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದೆ.

 
ತಮ್ಮ ಹಳೆ ಆಟವನ್ನು ಮತ್ತೊಮ್ಮೆ ಕ್ರೀಡಾಭಿಮಾನಿಗಳಿಗೆ ನೆನಪಿಸಿದ ಸೆಹ್ವಾಗ್ 58 ಎಸೆತಗಳನ್ನು ಎದುರಿಸಿ 122 ರನ್ ಸಿಡಿಸಿದರು. ಅವರ ಬೌಲಿಂಗ್‌ನಲ್ಲಿ 12 ಬೌಂಡರಿ ಮತ್ತು 8 ಸಿಕ್ಸರುಗಳಿದ್ದವು. ಸೆಹ್ವಾಗ್ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನದಿಂದ ಅವಮಾನಕ್ಕೆ ಗುರಿಯಾಗಿದ್ದರು. ಸೆಹ್ವಾಗ್ ಮಗನನ್ನು  ಶಾಲೆಯಲ್ಲಿ ಮಕ್ಕಳು ಕಿಂಡಲ್ ಮಾಡಿ ಸೆಹ್ವಾಗ್ ಸರಿಯಾಗಿ ಆಡ್ತಿಲ್ಲವೆಂದು ಛೇಡಿಸುತ್ತಿದ್ದರು.

ಅಲ್ಲದೇ ಅವರ ಪತ್ನಿಯ ಗೆಳತಿಯರು ಕೂಡ ಅವಮಾನ ಮಾಡಿದ್ದರು. ಆದರೆ ಸೋಲಪ್ಪಿಕೊಳ್ಳಲು ತಯಾರಿಲ್ಲದ ಸೆಹ್ವಾಗ್ ಇದಕ್ಕೆಲ್ಲ  ವಾಂಖೆಡ್ ಅಂಗಳದಲ್ಲಿ ಪ್ರದರ್ಶನದ ಮೂಲಕ ತಿರುಗೇಟು ನೀಡಿದರು.   ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು

. ಆದರೆ ಸೆಹ್ವಾಗ್ ಈ ರೀತಿ ಆರ್ಭಟಿಸುತ್ತಾರೆಂದು ಯಾರೂ ಎಣಿಸಿರಲಿಲ್ಲ. ಉಳಿದ ಆಟಗಾರರ ಪೈಕಿ ವೋರಾ 34 ರನ್ ಮತ್ತು ಮಿಲ್ಲರ್  19 ಎಸೆತಗಳಲ್ಲಿ 38 ರನ್ ಸ್ಕೋರ್ ಮಾಡಿ ಪಂಜಾಬ್ ತಂಡ 6 ವಿಕೆಟ್‌ ಕಳೆದುಕೊಂಡು ಭರ್ಜರಿ 226 ರನ್ ಗಳಿಸಿತು. ನಂತರ ಚೆನ್ನೈ ತಂಡ ಆರಂಭದಲ್ಲೇ ಸ್ಮಿತ್ ಮತ್ತು ಪ್ಲೆಸಿಸ್ ವಿಕೆಟ್ ಕಳೆದುಕೊಂಡರು ಸುರೇಶ್ ರೈನಾ ಸಿಡಿಲ ಮರಿಯಂತೆ ಆಡಿದರು. ಅವರು 25 ಎಸೆತಗಳಲ್ಲಿ 87 ರನ್ ಸಿಡಿಸಿ ಚೆನ್ನೈ ತಂಡಕ್ಕೆ ಭರವಸೆಯ ಬೆಳಕು ಮೂಡಿಸಿದ್ದರು.

ಅವರ ಸ್ಕೋರಿನಲ್ಲಿ 12 ಬೌಂಡರಿಗಳು ಮತ್ತು  6 ಸಿಕ್ಸರುಗಳಿದ್ದವು. ಆದರೆ ರೈನಾ ಜಾರ್ಜ್ ಬೈಲೀ ಎಸೆದ ಚೆಂಡು ವಿಕೆಟ್‌ಗೆ ನೇರವಾಗಿ ತಾಗಿ ರನೌಟ್‌ಗೆ ಬಲಿಯಾದರು.  ನಂತರ ಧೋನಿ ಆಟವನ್ನು ಮತ್ತೆ ಹಳಿಯ ಮೇಲೆ ತರಲು ಪ್ರಯತ್ನಿಸಿದರಾದರೂ ಬೃಹತ್ ಮೊತ್ತ ಮುಟ್ಟಲು ಸಾಧ್ಯವಾಗದೇ ಚೆನ್ನೈ ತಂಡ ಸೋಲಪ್ಪಿತು.

ಧೋನಿ 31 ಎಸೆತಗಳಲ್ಲಿ 42 ರನ್ ಬಾರಿಸಿದರು. ಚೆನ್ನೈ  7 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿ ಸೋಲನುಭವಿಸಿತು. ಪಂಜಾಬ್ ತಂಡ ಫೈನಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಭಾನುವಾರ ಎದುರಿಸಲಿದ್ದು, ಪಂಜಾಬ್‌ನ ಸೆಹ್ವಾಗ್ ಮತ್ತೆ ಅಬ್ಬರಿಸಲಿದ್ದಾರೆಯೇ ಎಂಬ ಕುತೂಹಲ ಕೆರಳಿಸಿದೆ. 

Share this Story:

Follow Webdunia kannada