Webdunia - Bharat's app for daily news and videos

Install App

ಅಜಿಂಕ್ಯಾ ರಹಾನೆ ಅರ್ಧಶತಕ: ಸನ್‌ರೈಸರ್ಸ್ ವಿರುದ್ಧ ರಾಯಲ್ಸ್‌ಗೆ ಜಯ

Webdunia
ಶುಕ್ರವಾರ, 17 ಏಪ್ರಿಲ್ 2015 (11:30 IST)
ಅಜಿಂಕ್ಯಾ ರಹಾನೆ ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ನಾಲ್ಕು ಜಯಗಳನ್ನು ದಾಖಲಿಸಿದೆ. ಸನ್‌ರೈಸರ್ಸ್ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಯಲ್ಸ್  ಪಂದ್ಯದ ಕೊನೆಯ ಎಸೆತದಲ್ಲಿ ಗುರಿಯನ್ನು ಮುಟ್ಟಿತು. 
 
 ಸನ್ ರೈಸರ್ಸ್ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದರೂ, ರಹಾನೆಯವರ 46 ಎಸೆತಗಳಲ್ಲಿ 62 ರನ್ ರಾಯಲ್ಸ್ ಗೆಲುವಿಗೆ ನೆರವಾಯಿತು. ಅವರ ಸ್ಕೋರಿನಲ್ಲಿ 9 ಬೌಂಡರಿಗಳಿದ್ದವು. ಸ್ಟೀವನ್ ಸ್ಮಿತ್ ಕರಣ್ ಶರ್ಮಾ ಬೌಲಿಂಗ್‌ನಲ್ಲಿ ವಾರ್ನರ್‌ಗೆ ಕ್ಯಾಚಿತ್ತು ಔಟಾದರು.  ಕರುಣ್ ನಾಯರ್ ಬೇಗನೇ ಔಟಾದ ಬಳಿಕ  ಸ್ಟುವರ್ಟ್ ಬಿನ್ನಿ  16 ರನ್ ಮತ್ತು ಫಾಕ್ನರ್ 6 ರನ್ ಗಳಿಸಿ ಅಜೇಯರಾಗಿ ಉಳಿದು ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿ ವಿಜಯಸಾಧಿಸಿದೆ.
 
 ರಹಾನೆ ಸ್ಕೋರಿನಲ್ಲಿ 9 ಬೌಂಡರಿಗಳಿದ್ದು, ತಂಡವನ್ನು ವಿಜಯದ ಹೊಸ್ತಿಲವರೆಗೆ ಒಯ್ಯಲು ರಹಾನೆಗೆ ಸಾಧ್ಯವಾಗದೇ  ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. 
 ಅಂತಿಮ 6 ಎಸೆತಗಳಲ್ಲಿ ರಾಯಲ್ಸ್‌ಗೆ 5 ರನ್ ಅಗತ್ಯವಿತ್ತು. ಕುಮಾರ್ ಉತ್ತಮವಾಗಿ ಬೌಲಿಂಗ್ ಮಾಡಿದರೂ ಜೇಮ್ಸ್ ಫಾಕ್ನರ್ ಅಂತಿಮ ಎಸೆತದಲ್ಲಿ ವಿಜಯದ ಬೌಂಡರಿಯನ್ನು ಬಾರಿಸಿದರು. 
 
ನಿಧಾನವಾದ ವಿಕೆಟ್‌ನಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ರಾಯಲ್ಸ್ ಬೌಲರುಗಳಾದ ಧವನ್ ಕುಲಕರ್ಣಿ ಮತ್ತು ಪ್ರವೀಣ್ ತಾಂಬೆ ತಲಾ ಎರಡು ವಿಕೆಟ್ ಪಡೆದು ಸನ್ ರೈಸರ್ಸ್ ತಂಡವನ್ನು 5 ವಿಕೆಟ್‌ಗೆ 127 ರನ್‌ ಸಾಧಾರಣ ಮೊತ್ತಕ್ಕೆ ನಿರ್ಬಂಧಿಸಿದರು.  ಆರಂಭದಲ್ಲೇ ಡೇವಿಡ್ ವಾರ್ನರ್  ರಹಾನೆಗೆ ರನೌಟ್ ಆದರು. ಅವರು 14 ಎಸೆತಗಳಲ್ಲಿ 21 ರನ್ ಗಳಿಸಿದ್ದರು. ಶಿಖರ್ ಧವನ್ ಎಂದಿನ ಪ್ರದರ್ಶನ ನೀಡದೇ 10 ರನ್‌ಗೆ ಔಟಾದರು.

ನಮನ್ ಓಜಾ ಮತ್ತು ಮೋರ್ಗಾನ್ ತಾಂಬೆಗೆ ಔಟಾದರು. ಮೋರ್ಗಾನ್ 27 ರನ್ ಮತ್ತು ರವಿ ಬೊಪಾರಾ 23 ರನ್ ಗಳಿಸಿ ಅಜೇಯರಾಗಿ ಉಳಿದರು.  ನಮನ್ ಓಜಾ 32 ಎಸೆತಗಳಲ್ಲಿ 25 ರನ್ ಗಳಿಸಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments