Webdunia - Bharat's app for daily news and videos

Install App

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

Sampriya
ಭಾನುವಾರ, 8 ಜೂನ್ 2025 (10:40 IST)
Photo Courtesy X
ಕೊಪ್ಪಳ: 18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಐಪಿಎಲ್‌ ಕಪ್‌ ಗೆದ್ದಿದೆ. ಈ ಪ್ರಯುಕ್ತ ಕೊಪ್ಪಳ ತಾಲ್ಲೂಕಿನ ಬಂಡಿ ಹರ್ಲಾಪುರ ಗ್ರಾಮದ ಯುವಕರು ಕೂಡ ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ್ದಾರೆ. 

ಆರ್‌ಸಿಬಿ ತಂಡವು ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ತಂಡವನ್ನು 6 ರನ್‌ಗಳಿಂದ ಬಗ್ಗು ಬಡಿದು ಮೊದಲ ಬಾರಿ ಚಾಂಪಿಯನ್‌ ಆಗಿದೆ. ಈ ಹಿನ್ನೆಲೆಯಲ್ಲಿ ಯುವಕರ ಸಂಭ್ರಮ ಮೇರೆ ಮೀರಿದೆ.

ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದ ಮರುದಿನ ಬೆಂಗಳೂರಿನಲ್ಲಿ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ಯುವಕರು ಮುಂದೂಡಿದ್ದರು. ಇದೀಗ, ಸಂಭ್ರಮವನ್ನು ಆಚರಿಸಿದ್ದಾರೆ.  

ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆದ್ದರೆ ಊರಿಗೆ ಮಾಂಸದೂಟ ಹಾಕಿಸುವುದಾಗಿ ಯುವಕರ ತಂಡ  ಪ್ರತಿಜ್ಞೆ ಮಾಡಿತ್ತು. ಇದರಂತೆ ಆರ್‌ಸಿಬಿ ತಂಡವು ಅಭಿಮಾನಿಗಳ ಕನಸನ್ನು ನನಸು ಮಾಡಿದ ಹಿನ್ನೆಲೆ ಯುವಕರು ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿದ್ದಾರೆ. ಸಸ್ಯಾಹಾರಿ ಊಟಕ್ಕೂ ವ್ಯವಸ್ಥೆ ಮಾಡಲಾಗಿತ್ತು.  

ಸಾಂಪ್ರದಾಯಿಕ ಶೈಲಿಯಲ್ಲಿ ಡಂಗುರ (ಸಾರ್ವಜನಿಕ ಘೋಷಣೆಗಳಿಗೆ ಬಳಸುವ ಡ್ರಮ್) ಬಾರಿಸುವ ಮೂಲಕ ಮತ್ತು ಬೀದಿಗಳಲ್ಲಿ ದೊಡ್ಡ ಗಂಟೆ ಬಾರಿಸುವ ಮೂಲಕ ಹಬ್ಬವನ್ನು ಘೋಷಿಸಲಾಯಿತು. ಎಲ್ಲರನ್ನೂ ಹಬ್ಬಕ್ಕೆ ಆಹ್ವಾನಿಸಲಾಯಿತು. ಈ ಹಬ್ಬಕ್ಕೆ ಸಂಪೂರ್ಣ ಗ್ರಾಮಸ್ಥರೇ ಹಣಕಾಸು ಒದಗಿಸಿದ್ದಾರೆನ್ನಲಾಗಿದೆ. ಬಂಡಿ ಹರ್ಲಾಪುರದಲ್ಲಿ ಸುಮಾರು 7,000 ಜನಸಂಖ್ಯೆ ಇದ್ದು, ಸುಮಾರು 3,000 ಜನರು ಸಂಭ್ರಮದಲ್ಲಿ ಪಾಲ್ಗೊಂಡರು.  <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ 3 ಬದಲಾವಣೆ ಖಚಿತ

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ENG vs IND: ನಾಳೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್‌, ಪ್ರಮುಖ ಆಟಗಾರನೇ ಪಂದ್ಯಕ್ಕಿಲ್ಲ

ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಎಡಗೈ ಬ್ಯಾಟರ್‌ ಅಭಿಷೇಕ್ ಶರ್ಮಾ

Video: ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನಡುವೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments