Select Your Language

Notifications

webdunia
webdunia
webdunia
webdunia

15 ವರ್ಷಗಳ ಆಟದ ನಂತರ ಯಾರಿಗೇನೂ ಸಾಬೀತು ಮಾಡಬೇಕಿಲ್ಲ: ಸೆಹ್ವಾಗ್

15 ವರ್ಷಗಳ ಆಟದ ನಂತರ ಯಾರಿಗೇನೂ ಸಾಬೀತು ಮಾಡಬೇಕಿಲ್ಲ: ಸೆಹ್ವಾಗ್
, ಸೋಮವಾರ, 21 ಏಪ್ರಿಲ್ 2014 (15:43 IST)
ನವದೆಹಲಿ:  ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಇಂಗ್ಲೆಂಡ್‌ಗೆ ಭಾರತದ ಪ್ರವಾಸಕ್ಕೆ ತಾವು ಆಯ್ಕೆಯಾಗಲು ನೆರವಾಗುತ್ತದೆ ಎಂದು ಸ್ಫೋಟಕ ಬ್ಯಾಟ್ಸ್‌ಮನ್ ಎಂದು ಹೆಸರಾಗಿದ್ದ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
 
ತಾವು 15 ವರ್ಷಗಳ ಕಾಲ ಕ್ರಿಕೆಟ್ ಆಡಿರುವುದರಿಂದ, 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ,ಸ 20 ಏಕದಿನಪಂದ್ಯಗಳಲ್ಲಿ ಮತ್ತು ಅನೇಕ ಟಿ20 ಪಂದ್ಯಗಳಲ್ಲಿ ಆಡಿರುವುದರಿಂದ ಯಾರಿಗೂ ಸಾಬೀತು ಮಾಡಲು ಏನೂ ಇಲ್ಲ ಎಂದು ಸೆಹ್ವಾಗ್ ಹೇಳಿದರು.ನಾನು ಸ್ವತಃ ನನ್ನ ಆಟವನ್ನು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇಆಫ್ ಅರ್ಹತೆ ಪಡೆದು ಚಾಂಪಿಯನ್‌ಷಿಪ್ ಗೆಲ್ಲಲು ನೆರವಾಗುತ್ತೇನೆ ಎಂದು ಸೆಹ್ವಾಗ್ ಹೇಳಿದರು.

ನನ್ನ ಕೆಲಸ ಶೇ.100ರಷ್ಟು ಸಾಮರ್ಥ್ಯವನ್ನು ಪ್ರದರ್ಶಿಸಿ ಕಿಂಗ್ಸ್ ಇಲೆವೆನ್‌ಗೆ ಉತ್ತಮ ಆರಂಭವನ್ನು ನೀಡುವುದಾಗಿದೆ. ಈ ಕ್ಷಣದಲ್ಲಿ ನಾನು ಬ್ಯಾಟಿಂಗ್ ಮೇಲೆ ಗಮನ ಹರಿಸಿದ್ದು, ಉತ್ತಮ ಆರಂಭ ನೀಡಲು ಯೋಚಿಸಿದ್ದೇನೆ ಎಂದು ಸೆಹ್ವಾಗ್ ಹೇಳಿದರು.

Share this Story:

Follow Webdunia kannada