Webdunia - Bharat's app for daily news and videos

Install App

ಇಂದು ಮೊದಲ ಕ್ವಾಲಿಫೈಯರ್: ಆರ್‌ಸಿಬಿಗೆ ಗೆಲುವು ದಕ್ಕುವುದೇ?

Webdunia
ಮಂಗಳವಾರ, 24 ಮೇ 2016 (11:18 IST)
ಬೆಂಗಳೂರು: ವಿರಾಟ್ ಕೊಹ್ಲಿ ಅವರ ಸ್ಫೂರ್ತಿದಾಯಕ ನಾಯಕತ್ವದ ಬಲದಿಂದ ರಾಯಲ್ ಚಾಲೆಂಜರ್ಸ್ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಹತ್ತಿರದಲ್ಲಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ  ಟೇಬಲ್ ಟಾಪರ್ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ಕೆಲವು ಪಂದ್ಯಗಳನ್ನು ಸೋತ ಮೇಲೆ ಪ್ಲೇ ಆಫ್ ಪ್ರವೇಶಕ್ಕೆ ಲೀಗ್ ಹಂತದ ಕೊನೆಯ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿತ್ತು. ಬೆಂಗಳೂರು ತಂಡ ಕೊಹ್ಲಿಯ ಸಾರಥ್ಯದೊಂದಿಗೆ ಹೋರಾಟದ ಮನೋಭಾವ ತೋರಿಸಿ ಸತತ ನಾಲ್ಕು ಜಯಗಳನ್ನು ದಾಖಲಿಸಿ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಆಕ್ರಮಿಸಿತು.
 
 ಆರ್‌ಸಿಬಿ ಆರಂಭಿಕ ಸುತ್ತಿನ 14 ಪಂದ್ಯಗಳಲ್ಲಿ 16 ಪಾಯಿಂಟ್ ದಾಖಲಿಸಿ 18 ಪಾಯಿಂಟ್ ಗಳಿಸಿದ ಗುಜರಾತ್ ಲಯನ್ಸ್ ನಂತರ ಪಾಯಿಂಟ್ ಪಟ್ಟಿಯಲ್ಲಿದೆ. ಆರ್‌ಸಿಬಿ  ನೀರಸವಾಗಿ ಐಪಿಎಲ್ ಆರಂಭಿಸಿದರೂ ನಂತರ ಸರಿಯಾದ ಸಮಯದಲ್ಲಿ ಪುಟಿದೆದ್ದು ಲಯನ್ಸ್, ನೈಟ್ ರೈಡರ್ಸ್, ಕಿಂಗ್ಸ್ ಇಲೆವನ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಸೋಲಿಸಿ ಟಾಪ್ 4 ರ ಸ್ಥಾನವನ್ನು ಆಕ್ರಮಿಸಿದೆ.
 
 ಡೇರ್‌ಡೆವಿಲ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಆರ್‌ಸಿಬಿ ತನ್ನ ಎದುರಾಳಿಗಳನ್ನು 138ಕ್ಕೆ ಸೀಮಿತಗೊಳಿಸಿ ಕೊಹ್ಲಿಯ ಅಜೇಯ 54 ರನ್ ನೆರವಿನೊಂದಿಗೆ ಗುರಿಯನ್ನು ಮುಟ್ಟಿತು. ಗೆಲುವಿನ ಗತಿಯನ್ನು ಇನ್ನುಳಿದ 2 ಪಂದ್ಯಗಳಲ್ಲಿ ಮುಂದುವರಿಸಿ ಪ್ರಶಸ್ತಿ ಬಾಚಿಕೊಳ್ಳಲು ಆರ್‌ಸಿಬಿ ತುದಿಗಾಲಲ್ಲಿ ನಿಂತಿದೆ.
 
 ಕೊಹ್ಲಿ ಇದುವರೆಗೆ ದಾಖಲೆಯ 919 ರನ್ ಸೇರಿಸಿದ್ದು ನಾಲ್ಕು ಶತಕಗಳು ಮತ್ತು 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ನಿರಾಶಾದಾಯಕ ಆರಂಭದ ಬಳಿಕ ಕೊಹ್ಲಿ ತಂಡದಲ್ಲಿ ವಿಶ್ವಾಸ ತುಂಬಿದ್ದಾರೆ.  ಒಂದು ಹಂತದಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದು ದೂರದ ಕನಸಾಗಿದ್ದಾಗ, ನಾಯಕ ಕೊಹ್ಲಿ ಅಮೋಘ ಬ್ಯಾಟಿಂಗ್ ಮತ್ತು ನಾಯಕತ್ವದ ಗುಣಗಳ ಮೂಲಕ ಅದನ್ನು ಸಾಧ್ಯವಾಗಿಸಿದ್ದಾರೆ.  ಕೊಹ್ಲಿ, ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಎದುರಾಳಿ ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಮೂಲಕ ದುಃಸ್ವಪ್ನವಾಗಿ ಪರಿಣಮಿಸಿದ್ದಾರೆ.
 
 ಗುಜರಾತ್ ಲಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವೆನಿಸಿದೆ. ಗುಜರಾತ್ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಸೋಲಿಸಿ ಮುಂದಿನ ಪಂದ್ಯದಲ್ಲಿ 144 ರನ್‌ಗಳಿಂದ ಆರ್‌ಸಿಬಿ ವಿರುದ್ಧ ಸೋಲನುಭವಿಸಿದೆ. ಸುರೇಶ್ ರೈನಾ ತಂಡ ಈ ಮುಜುಗರದ ಸೋಲಿಗೆ ಕ್ವಾಲಿಫೈಯರ್‌ನಲ್ಲಿ ಸೇಡು ತೀರಿಸಿಕೊಂಡು ಐಪಿಎಲ್ ಫೈನಲ್‌ಗೆ ನೇರವಾಗಿ ಪ್ರವೇಶಿಸುವ ಕಾತುರದಲ್ಲಿದೆ.
 
 ಗುಜರಾತ್ ಲಯನ್ಸ್ ಪರ ಆರಾನ್ ಫಿಂಚ್, ಮೆಕಲಮ್, ಡ್ವೇನ್ ಸ್ಮಿತ್, ರೈನಾ, ಕಾರ್ತಿಕ್ , ಬ್ರೇವೊ ಅವರ ಬ್ಯಾಟಿಂಗ್ ಬಲದಿಂದ ಕೂಡಿದೆ. ಬೌಲಿಂಗ್ ವಿಭಾಗದಲ್ಲಿ ಬ್ರೇವೊ ಮತ್ತು ಕುಲಕರ್ಣಿ ಮೇಲೆ ಅವಲಂಬಿತವಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments