Select Your Language

Notifications

webdunia
webdunia
webdunia
webdunia

ಯುವರಾಜ್ ಕೊನೆಯ ಹಂತಗಳಲ್ಲಿ ಸ್ಫೋಟಕ ಬ್ಯಾಟಿಂಗ್ : ಡುಮಿನಿ ಆಶಯ

ಯುವರಾಜ್ ಕೊನೆಯ ಹಂತಗಳಲ್ಲಿ ಸ್ಫೋಟಕ ಬ್ಯಾಟಿಂಗ್ :  ಡುಮಿನಿ ಆಶಯ
ನವದೆಹಲಿ , ಸೋಮವಾರ, 27 ಏಪ್ರಿಲ್ 2015 (19:28 IST)
ಈ ಬಾರಿ ಐಪಿಎಲ್‌ನ ದುಬಾರಿ ಮೊತ್ತಕ್ಕೆ ಖರೀದಿಯಾದ ಯುವರಾಜ್ ಸಿಂಗ್ ನಿರೀಕ್ಷಿಸಿದಂತೆ ಐಪಿಎಲ್‌ನಲ್ಲಿ ಸ್ಫೋಟಕ ಆಟವನ್ನು ಆಡಿಲ್ಲ. ಆದರೆ ಡೆಲ್ಲಿ ಡೇರ್ ಡೆವಿಲ್ಸ್ ನಾಯಕ ಡುಮಿನಿ ಸ್ಟಾರ್ ಆಟಗಾರನಿಗೆ ಬೆಂಬಲವಾಗಿ ನಿಂತಿದ್ದು, ಟಿ20 ಲೀಗ್ ಕೊನೆಯ ಹಂತಗಳಲ್ಲಿ ಯುವರಾಜ್  ಚೆನ್ನಾಗಿ ಆಡುತ್ತಾರೆಂದು ಆಶಿಸಿದ್ದಾರೆ.
 
16 ಕೋಟಿ ರೂ.ಗಳಿಗೆ ಖರೀದಿಯಾದ ಯುವರಾಜ್ ಏಳು ಇನ್ನಿಂಗ್ಸ್‌ಗಳಲ್ಲಿ 17.71 ಸರಾಸರಿಯಂತೆ 124 ರನ್ ಗಳಿಸಿದ್ದು, ಅವರ ಹೆಸರಿನಲ್ಲಿ ಒಂದು ಅರ್ಧಶತಕ ಮಾತ್ರವಿದೆ. ರಾಯಲ್ಸ್ ಚಾಲೆಂಜರ್ಸ್ ವಿರುದ್ಧ ಪಂದ್ಯದಲ್ಲಿ ಅವರು 5 ಎಸೆತಗಳಲ್ಲಿ 2 ರನ್ ಮಾತ್ರ ಮಾಡಿ ಔಟಾಗಿದ್ದರು. ತಂಡದ ಅಸ್ಥಿರ ಪ್ರದರ್ಶನದ ನಡುವೆ ಆಟಗಾರನೊಬ್ಬನನ್ನು ಮಾತ್ರ ಪ್ರತ್ಯೇಕಿಸುವುದು ಸರಿಯಲ್ಲ ಎಂದು ಹೇಳಿದರು. 
 
ಅವರು ಸ್ಫೋಟಕ ಆಟಗಾರನಾಗಿದ್ದು, ಪಂದ್ಯಾವಳಿಯ ಕೊನೆಯ ಹಂತಗಳಲ್ಲಿ ಅವರು ನೈಜ ಪ್ರದರ್ಶನ ನೀಡುತ್ತಾರೆಂದು ಡುಮಿನಿ ಆಶಿಸಿದರು.  ಯುವರಾಜ್ ಸ್ಫೋಟಕ ಬ್ಯಾಟಿಂಗ್ ಹೊಮ್ಮಬೇಕಿರುವ ನಡುವೆ,  ಇನ್ನೊಬ್ಬ ಹಿರಿಯ ಆಟಗಾರ ಜಹೀರ್ ಖಾನ್ ಫಿಟ್ನೆಸ್ ಬಗ್ಗೆ ಊಹಾಪೋಹದ ನಡುವೆ ಅವರು ಕಿಂಗ್ಸ್ ಇಲೆವೆನ್ ವಿರುದ್ಧ ಪಂದ್ಯದಲ್ಲಿ ಲಭ್ಯರಾಗುತ್ತಾರೆಂದು ಡುಮಿನಿ ಹೇಳಿದ್ದಾರೆ. 

Share this Story:

Follow Webdunia kannada