Select Your Language

Notifications

webdunia
webdunia
webdunia
webdunia

ಚೆನ್ನೈಗೆ ಸೋತ ಬೆಂಗಳೂರು

ಚೆನ್ನೈಗೆ ಸೋತ ಬೆಂಗಳೂರು
ಚೆನ್ನೈ , ಮಂಗಳವಾರ, 5 ಮೇ 2015 (11:06 IST)
ಬೌಲರ್‌ಗಳ ಉತ್ತಮ ಪ್ರದರ್ಶನದ ಲಾಭ ಪಡೆದುಕೊಳ್ಳಲು ವಿಫಲರಾದ ಆರ್‌ಸಿಬಿ ಬ್ಯಾಟ್ಸಮನ್‍‌ಗಳು ಮೈದಾನಕ್ಕೆ ಪರೇಡ್ ಮಾಡುವುದರ ಮೂಲಕ ಚೆನ್ನೈ ವಿರುದ್ಧದ ಪಂದ್ಯದಲ್ಲಿ 24ರನ್‌ಗಳ ಸೋಲನ್ನು ಅನುಭವಿಸಿದರು.  

ಚೆನ್ನೈನ ಚಿದಂಬರ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಧೋನಿ ತಂಡ 9 ವಿಕೆಟ್ ನಷ್ಟಕ್ಕೆ 148 ರನ್‌ಗಳ ಸಾಧಾರಣ ಮೊತ್ತ ಗಳಿಸಿತ್ತು.   ಮಿಚೆಲ್ ಸ್ಟಾರ್ಕ್ 24ರನ್‌ಗೆ 3 ವಿಕೆಟ್ ಗಳಿಸಿದರೆ, ಹರ್ಷಲ್ ಪಟೇಲ್ ಹಾಗೂ ಡೇವಿಡ್ ವೈಸ್ ತಲಾ 2 ವಿಕೆಟ್ ಕಿತ್ತರು. ಚೆನ್ನೈ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸುರೇಶ್ ರೈನಾ 46 ಎಸೆತಗಳಲ್ಲಿ 52 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
 
ಆದರೆ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದ ಬೆಂಗಳೂರು ಸತತ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದ ಚೈನ್ನೈ ತಂಡದ ವಿರುದ್ಧ ನೆಲಕಚ್ಚಿಕಚ್ಚಿತು.
 
ಮಂದೀಪ್ ಸಿಂಗ್ 0 ಗೆ ಮರಳಿದರೆ, ಗೇಲ್ ಸ್ಥಾನದಲ್ಲಿ ಆಡಲಿಳಿದ ಮ್ಯಾಡಿನ್‌ಸನ್ ಕೇವಲ 4 ರನ್‌ ಗಳಿಸುವ ಮೂಲಕ ನಿರಾಶೆ ಮೂಡಿಸಿದರು. ನಂತರ ಆಡಲಿಳಿದ ಎಬಿಡಿ 14 ಎಸೆತಗಳಲ್ಲಿ 21 ರನ್ ಗಳಿಸಿ ಮರಳಿದರು. 
 
4ನೇ ವಿಕೆಟ್‌ಗೆ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ (23) 63ರನ್ ಕಲೆ ಹಾಕಿದರು.  ಆದರೆ 48 ರನ್ ಗಳಿಸಿದ್ದ ಕೊಹ್ಲಿ ರನ್ ಔಟ್ ಆಗಿ ಮರಳುವುದರ ಮೂಲಕ ಬೆಂಗಳೂರು ತಂಡದ ಕುಸಿತ ಆರಂಭವಾಯಿತು. ನಂತರ ಬಂದ ಯಾವ ಆಟಗಾರರು ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಲಿಲ್ಲ. ಬ್ರಾವೋ ( 17ಕ್ಕೆ 2) ಮತ್ತು ನೆಹ್ರಾ ಬೌಲಿಂಗ್‌ಗೆ (19ಕ್ಕೆ 3) ನಲುಗಿದ ಆರ್‌ಸಿಬಿ 19.4 ಓವರ್‌ಗಳಲ್ಲಿ 124 ರನ್‌ಗಳಿಗೆ ಶರಣಾಯಿತು.
 
ಸ್ಕೋರ್ ಬೋರ್ಡ್ : ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ 148 (ಸುರೇಶ್ ರೈನಾ 52, ಮೆಕಲ್ಲಮ್ 20, ಫಫ್ ಡು ಪ್ಲೆಸಿಸ್ 24, ಧೋನಿ 29 ಮಿಚೆಲ್ ಸ್ಟಾಕ್ 24ಕ್ಕೆ 3, ವೈಸ್ 29ಕ್ಕೆ 2, ಪಟೇಲ್ 19ಕ್ಕೆ 2) 
 
ರಾಯಲ್ ಚಾಲೆಂಜರ್ಸ್‌ ಬೆಂಗಳೂರು 19.4 ಓವರ್‌ಗಳಲ್ಲಿ 124 (ವಿರಾಟ್ ಕೊಹ್ಲಿ 48, ಎಬಿಡಿ 21, ಕಾರ್ತಿಕ್ 23, ನೆಹ್ರಾ 19ಕ್ಕೆ 3, ಬ್ರಾವೊ 17ಕ್ಕೆ 2, ಪಾಂಡೆ 28ಕ್ಕೆ 2)

Share this Story:

Follow Webdunia kannada