Select Your Language

Notifications

webdunia
webdunia
webdunia
webdunia

ಭಾರತೀಯ ಅಂಪೈರ್‌ಗಳ ತರಬೇತಿಗೆ ಸೈಮನ್ ಟೌಫೆಲ್ ಶುಲ್ಕ 70 ಲಕ್ಷ ರೂ.

ಭಾರತೀಯ ಅಂಪೈರ್‌ಗಳ ತರಬೇತಿಗೆ ಸೈಮನ್ ಟೌಫೆಲ್ ಶುಲ್ಕ 70 ಲಕ್ಷ ರೂ.
ನವದೆಹಲಿ , ಬುಧವಾರ, 20 ಮೇ 2015 (16:01 IST)
ಒಂದು ಕಡೆ ಬಿಸಿಸಿಐ ಪದಾಧಿಕಾರಿಗಳು ಅನವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುತ್ತಿರುವ ನಡುವೆ, ಇನ್ನೊಂದು ಕಡೆ ತನ್ನ ಅಂಪೈರ್‌ಗಳಿಗೆ ತರಬೇತಿ ನೀಡಲು ಮಂಡಳಿ ಭಾರೀ ವೆಚ್ಚ ಮಾಡುತ್ತಿದೆ.  ಯಾವುದೇ ಭಾರತೀಯರು ಅಂಪೈರ್‌ಗಳು ಮುಟ್ಟಬಹುದಾದ ಅತ್ಯಧಿಕ ಮಟ್ಟವಾದ ಐಸಿಸಿ ಎಲೈಟ್ ಪ್ಯಾನೆಲ್‌ಗೆ  11 ವರ್ಷಕ್ಕಿಂತ ಹೆಚ್ಚು ಕಾಲ ಮುಟ್ಟಿಲ್ಲ ಎನ್ನುವುದು ಸುಳ್ಳಲ್ಲ. 2004ರ ಜನವರಿಯಲ್ಲಿ ಎಸ್. ವೆಂಕಟರಾಘವನ್ ಟೆಸ್ಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ್ದರು.

 
ಇಂತಹ ತಪ್ಪುಗಳನ್ನು ಸರಿಪಡಿಸಲು 2013ರಲ್ಲಿ ಬಿಸಿಸಿಐ ಭಾರತೀಯ ಅಂಪೈರ್‌ಗಳಿಗೆ ಶಿಕ್ಷಣ ನೀಡುವುದಕ್ಕಾಗಿ ತಜ್ಞರನ್ನು ನೇಮಿಸಿಕೊಳ್ಳಲು ನಿರ್ಧರಿಸಿತು. ಪ್ರಸಕ್ತ ಐಸಿಸಿ ಅಂಪೈರ್ ಪರ್‌ಫಾರ್ಮೆನ್ಸ್ ಮತ್ತು ಟ್ರೇನಿಂಗ್ ಮ್ಯಾನೇಜರ್ ಆಗಿರುವ ಆಸ್ಟ್ರೇಲಿಯಾದ ನಿವೃತ್ತ ಸೈಮನ್ ಟೌಫೆಲ್ ಅವರನ್ನು 2013-14ರ ಆವೃತ್ತಿಯೊಳಗೆ 100 ಭಾರತೀಯ ಅಂಪೈರ್‌ಗಳಿಗೆ ತರಬೇತು ನೀಡಲು ಆಯ್ಕೆ ಮಾಡಲಾಯಿತು. 
 
ಟೌಫಲ್ ಸೇವೆಗೆ ಬಿಸಿಸಿಐ ಈಗ ಭಾರೀ ಬೆಲೆ ತೆತ್ತಿದ್ದು, ಒಟ್ಟು 2014 ಮತ್ತು 2015ರ ಅವಧಿಗೆ 1,10,000 ಡಾಲರ್ ಶುಲ್ಕವನ್ನು ಪಾವತಿ ಮಾಡಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಪ್ರಸ್ತುತ ವಿನಿಮಯ ದರವಾದ ಪ್ರತಿ ಡಾಲರ್‌ಗೆ 63.81ರೂ. ದರದಲ್ಲಿ ಇದು 70 ಲಕ್ಷ ರೂ.ಗಳಾಗುತ್ತದೆ.

2012 ಐಸಿಸಿ ವಿಶ್ವ ಟ್ವೆಂಟಿ 20 ಬಳಿಕ ನಿವೃತ್ತರಾಗುವ ತನಕ ಅತ್ಯುತ್ತಮ ಗೌರವಾನ್ವಿತ ಅಂಪೈರ್ ಆಗಿದ್ದ ಟೌಫೆಲ್ ಐಸಿಸಿ ಶ್ರೇಷ್ಠ ಅಂಪೈರ್ ಪ್ರಶಸ್ತಿಯನ್ನು ಸತತವಾಗಿ ಐದು ವರ್ಷಗಳ ಕಾಲ ಗಳಿಸಿದ್ದರು.  ಭಾರತದ ಅಂಪೈರ್‌ಗಳಿಗೆ ಅವರು ಸುಧಾರಣೆ ಆಧಾರಿತ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದಾರೆಂದು ಹೇಳಲಾಗುತ್ತಿದೆ.  ಕಾರ್ಯಾಗಾರಗಳನ್ನು ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸುವುದು, ಉಪನ್ಯಾಸಗಳನ್ನು ನೀಡುವುದು, ಪರೀಕ್ಷೆಗಳನ್ನು ಆಯೋಜಿಸುವುದು ಅವರ ಇತರೆ ಜವಾಬ್ದಾರಿಗಳು. 

Share this Story:

Follow Webdunia kannada