Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ನಡವಳಿಕೆ ಮೇಲೆ ಬಿಸಿಸಿಐ ಹದ್ದಿನ ಕಣ್ಣು

ವಿರಾಟ್ ಕೊಹ್ಲಿಯ ನಡವಳಿಕೆ ಮೇಲೆ ಬಿಸಿಸಿಐ ಹದ್ದಿನ ಕಣ್ಣು
ಬೆಂಗಳೂರು , ಶನಿವಾರ, 25 ಏಪ್ರಿಲ್ 2015 (17:02 IST)
ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡವಳಿಕೆ ಬಗ್ಗೆ ಕಣ್ಣಿಟ್ಟಿರುವುದಾಗಿ ಬಿಸಿಸಿಐ ತಿಳಿಸಿದೆ. ಕೊಹ್ಲಿ ಅವರ ನಡವಳಿಕೆ ಬಗ್ಗೆ ಗಮನವಹಿಸಿರುವುದಾಗಿ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ತಿಳಿಸಿದರು. 
 
 
ಕೊಹ್ಲಿ ನಡವಳಿಕೆಯನ್ನು ಪರಿಶೀಲಿಸಲಾಗುತ್ತಿದ್ದು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಬಾಸ್ ಪತ್ರಿಕೆಯೊಂದಕ್ಕೆ ತಿಳಿಸಿದರು. 
 ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಆಕ್ರಮಣಕಾರಿ ಮನೋಭಾವಕ್ಕೆ ಹೆಸರಾಗಿರುವ ಕೊಹ್ಲಿ ಇತ್ತೀಚೆಗೆ ವಿಶ್ವಕಪ್ ಸಂದರ್ಭದಲ್ಲಿ ಪತ್ರಕರ್ತರೊಬ್ಬರ ಮೇಲೆ ಹರಿಹಾಯುವ ಮೂಲಕ ಮುಖಪುಟದ ಸುದ್ದಿಯಾಗಿದ್ದರು.  ಬಿಸಿಸಿಐ ಈ ಕುರಿತು ಕೊಹ್ಲಿ ಅವರಿಗೆ ಎಚ್ಚರಿಕೆ ನೀಡಿತ್ತು. 
 
 ಈ ತಿಂಗಳ ಆರಂಭದಲ್ಲಿ ಕೂಡ ತಮ್ಮ ಟೀಕಾಕಾರರ ವಿರುದ್ಧ ಕೊಹ್ಲಿ ವಾಗ್ದಾಳಿ ಮಾಡಿದ್ದರು.  ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅವರು ನೀಡಿದ ಪ್ರದರ್ಶನದ ಬಗ್ಗೆ ಟೀಕೆ ಮಾಡಲಾಗಿತ್ತು. ಈ ಕುರಿತು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಕೊಹ್ಲಿ ಅವರು ನಾಚಿಕೆ ಪಡಬೇಕು.

ಕಳೆದ ಐದು ವರ್ಷಗಳಲ್ಲಿ ನಾನು ಗೆಲ್ಲಿಸಿಕೊಟ್ಟಷ್ಟು ಪಂದ್ಯಗಳನ್ನು ಯಾರೂ ಗೆಲ್ಲಿಸಿಕೊಟ್ಟಿಲ್ಲ ಎಂದು ಕಿಡಿ ಕಾರಿದ್ದರು.  ಕೊಹ್ಲಿಯ ಆವೇಶದ ನಡವಳಿಕೆಯಿಂದ  ಸುನಿಲ್ ಗವಾಸ್ಕರ್, ಲಕ್ಷ್ಮಣ್ ಸೇರಿದಂತೆ ಅನೇಕ ವಲಯಗಳಿಂದ ಟೀಕೆಗೆ ಗುರಿಯಾಗಿದ್ದರು. 

Share this Story:

Follow Webdunia kannada