Select Your Language

Notifications

webdunia
webdunia
webdunia
webdunia

ಐಪಿಎಲ್ ಫೈನಲ್‌‌ನಲ್ಲಿ ಮುಖ ಮುಚ್ಚಿಕೊಂಡ ಸಾಕ್ಷಿ, ಮಹಿ ಟಾಟೂ ಬಹಿರಂಗ

ಐಪಿಎಲ್ ಫೈನಲ್‌‌ನಲ್ಲಿ ಮುಖ ಮುಚ್ಚಿಕೊಂಡ ಸಾಕ್ಷಿ, ಮಹಿ ಟಾಟೂ ಬಹಿರಂಗ
klokatta , ಮಂಗಳವಾರ, 26 ಮೇ 2015 (10:22 IST)
ಕ್ಯಾಮೆರಾ ಎದುರು ನಗೆಬೀರುತ್ತಿದ್ದ ಟೀಂ ಇಂಡಿಯಾ ನಾಯಕ ದೋನಿ ಪತ್ನಿ ಸಾಕ್ಷಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲುತ್ತಿದ್ದಾಗ ಅವರ ಮುಖದಲ್ಲಿ ನಗು ಸುಳಿಯಲಿಲ್ಲ.

ತಮ್ಮ ಹತಾಶೆಯನ್ನು ಮುಚ್ಚಿಕೊಳ್ಳಲು ಕ್ಯಾಮರಾಗಳಿಂದ ಮುಖ ತಿರುಗಿಸಿದರು. ಆದರೆ ಆ ಪ್ರಕ್ರಿಯೆಯಲ್ಲಿ ಪತಿಯ ಹೆಸರಿನ ಟಾಟೂವನ್ನು ಕುತ್ತಿಗೆಯ ಮೇಲೆ ಹಾಕಿಸಿಕೊಂಡಿದ್ದು ಬಹಿರಂಗವಾಯಿತು.
 
ಕ್ರಿಕೆಟ್ ನೆಚ್ಚಿನ ಅಭಿಮಾನಿಯಾದ ಸಾಕ್ಷಿ 2010ರಲ್ಲಿ ಧೋನಿಯನ್ನು ಮದುವೆಯಾದಾಗಿನಿಂದಲೂ ಸಿಎಸ್‍‌ಕೆ ಪಂದ್ಯಗಳಲ್ಲಿ ಕಾಯಂ ಹಾಜರಿರುತ್ತಾರೆ. ದಂಪತಿ ಮೊದಲ ಬಾರಿಗೆ ಪುತ್ರಿ ಜಿವಾಗೆ ಜನ್ಮನೀಡಿದರು. ಆಗಿನಿಂದ ಸಾಕ್ಷಿ ಹಾಜರಿರುವ ಐಪಿಎಲ್ ಪಂದ್ಯಗಳಿಗೆಲ್ಲಾ ಜಿವಾ ಕೂಡ ಕಂಪೆನಿ ನೀಡುತ್ತಿದ್ದಾಳೆ.
 
 ಭಾನುವಾರ ತಾಯಿ ಮತ್ತು ಪುತ್ರಿ ಸಿಎಸ್‌ಕೆಗೆ ಚಿಯರ್ ಮಾಡಲು ಸೇರಿದ್ದರು. ಆದರೆ ಸಿಎಸ್‌ಕೆ ಸೋಲುವುದು ನಿಶ್ಚಿತವಾದ ನಂತರ ಕ್ಯಾಮೆರಾಗೆ ಮುಖ ತೋರಿಸಲು ಹಿಂಜರಿದರು. ಅವರು ಮುಖ ಮುಚ್ಚಿಕೊಳ್ಳುತ್ತಿದ್ದಂತೆ ಧೋನಿಯ ಹಿಂದಿ ಅಡ್ಡ ಹೆಸರು ಮಹಿ ಎಂದು ಟಾಟೂ ಹಾಕಿಸಿಕೊಂಡಿದ್ದು ಬಹಿರಂಗವಾಯಿತು.

Share this Story:

Follow Webdunia kannada