Select Your Language

Notifications

webdunia
webdunia
webdunia
webdunia

ಎರಡನೆ ಗೆಲುವು ಕಂಡ ಮುಂಬೈ ಇಂಡಿಯನ್ಸ್

ಎರಡನೆ ಗೆಲುವು ಕಂಡ ಮುಂಬೈ ಇಂಡಿಯನ್ಸ್
ಮುಂಬೈ , ಸೋಮವಾರ, 5 ಮೇ 2008 (09:33 IST)
ಸಣ್ಣ ಮೊತ್ತವನ್ನು ನಾಯಕ ಶಾನ್ ಪೊಲ್ಲಾಕ್ ಅವರ ಮಾರ್ಗದರ್ಶನದಲ್ಲಿ ಸಮರ್ಥವಾಗಿ ರಕ್ಷಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡವು, ಡಿ. ವೈ ಪಾಟೀಲ್ ಸ್ಟೇಡಿಯಮ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 29 ರನ್‌ಗಳ ಅಂತರದಿಂದ ಸೋಲಿಸಿ ಟೂರ್ನಿಯಲ್ಲಿ ಎರಡನೆ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿ ಎಂಟು ವಿಕೆಟ್ ಕಳೆದುಕೊಂಡು 162 ರನ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಂತರ ಎದುರಾಳಿ ಡೇರ್ ಡೆವಿಲ್ಸ್ ತಂಡವನ್ನು ನಿಖರ ಬೌಲಿಂಗ್‌ನಿಂದ ಕಾಡಿ ಹತ್ತು ವಿಕೆಟ್‍‌ಗಳನ್ನು 18.5 ಓವರುಗಳಲ್ಲಿ ಕಬಳಿಸುವಲ್ಲಿ ಸಫಲವಾಯಿತು. 163 ರನ್‌ಗಳ ಗುರಿ ಬೆನ್ನತ್ತಿ ಇನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡವು 133 ರನ್ ಮಾಡುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.

ಐಪಿಎಲ್ ಲೀಗ್ ಟೂರ್ನಿಯಲ್ಲಿ ಈಗಾಗಲೇ ಕೆಳ ಕ್ರಮಾಂಕದಲ್ಲಿ ನಿಂತಿರುವ ಮುಂಬೈ ಇಂಡಿಯನ್ಸ್ ತಂಡವು ತನ್ನ ಆರನೆ ಪಂದ್ಯದಲ್ಲಿ ಪ್ರಭಾವಿ ಬೌಲಿಂಗ್‌ನ್ನು ಹಂಗಾಮಿ ನಾಯಕ ಶಾನ್ ಪೊಲ್ಲಾಕ್ ಅವರ ನೇತೃತ್ವದಲ್ಲಿ ಪ್ರದರ್ಶಿಸಿತು. ಆಶಿಷ್ ನೇಹ್ರಾ ಸತತವಾಗಿ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಸೇರಿದಂತೆ 25 ರನ್‌ ನೀಡಿ ಮೂರು ವಿಕೆಟ್ ಪಡೆದರೆ, ನಾಯಕ ಶಾನ್ ಪೊಲ್ಲಾಕ್ ಹದಿನಾರು ರನ್ ನೀಡಿ ಎರಡು ವಿಕೆಟ್ ಕಿತ್ತರು. ತಂಡದ ಅನುಭವಿ ಬೌಲರುಗಳ ಪ್ರದರ್ಶನದಿಂದ ಉತ್ತೇಜಿತಗೊಂಡ ಧವಳ್ ಕುಲಕರ್ಣಿ ಹದಿನೆಂಟು ರನ್ ನೀಡಿ ಎರಡು ವಿಕೆಟ್ ಪಡೆದು ಮಿಂಚಿದರು. ಮುಂಬೈ ತಂಡದ ಬೌಲಿಂಗ್ ಪ್ರದರ್ಶನದಲ್ಲಿ ಮಿಂಚಿದ್ದು ಡಾಮಿನಿಕ್ ಥೋರ್ನ್ಲೆ, ಆರನೆ ಓವರಿನಲ್ಲಿ ಬೌಲಿಂಗ್ ಮಾಡಲು ದಾಳಿಗೆ ಇಳಿದ ಅವರು ವೀರೇಂದ್ರ್ ಸೆಹವಾಗ್ ಅವರನ್ನು ಪುಲ್ ಟಾಸ್‌ ಬೌಲಿಂಗ್‌ನಲ್ಲಿ ಔಟ್ ಮಾಡಿದರು.

ಇನಿಂಗ್ಸ್ ಆರಂಭಿಸಿದ ಡೆರಡೇವಿಲ್ಸ್ ತಂಡದ ನಾಯಕ ವೀರೇಂದ್ರ ಸೆಹವಾಗ್ ಅವರು 20 ಎಸೆತಗಳಲ್ಲಿ 40 ರನ್ ಮಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಇರಾದೆ ತೋರಿಸಿದ್ದರು. ವೀರೂ ಅವರ 40 ರನ್‌ಗಳ ಆಟದಲ್ಲಿ ಮೂರು ಸಿಕ್ಸರ್ ಮತ್ತು ಮೂರು ಬೌಂಡರಿ ಸೇರಿವೆ. ಎ ಬಿ ಡಿವಿಲಿಯರ್ಸ್ ರನೌಟ್ ಅದ ನಂತರ ಕ್ರೀಸಿಗೆ ಬಂದ ಶೋಯಬ್ ಮಲ್ಲಿಕ್ ಅವರೊಂದಿಗೆ ನಾಲ್ಕನೆ ವಿಕೆಟ್ ಆಟವನ್ನು ಮುಂದುವರಿಸಿದ ವೀರೇಂದ್ರ ಸೆಹ್ವಾಗ್, ಜೊತೆಯಾಟದಲ್ಲಿ 45 ರನ್ ಕಲೆ ಹಾಕಿದರು.

Share this Story:

Follow Webdunia kannada