Webdunia - Bharat's app for daily news and videos

Install App

ಐಪಿಎಲ್ 13: ಆರ್ ಸಿಬಿ ಶುಭಾರಂಭ, ಅಭಿಮಾನಿಗಳು ಖುಷ್

Webdunia
ಮಂಗಳವಾರ, 22 ಸೆಪ್ಟಂಬರ್ 2020 (09:07 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ ಮಾಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ ಗಳ ಜಯ ಗಳಿಸಿದೆ.

 
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರ್ ಸಿಬಿ ಆರಂಭ ಉತ್ತಮವಾಗಿತ್ತು. ಪಾರ್ಥಿವ್ ಪಟೇಲ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ದೇವದತ್ತ ಪಡಿಕ್ಕಲ್ 56 ರನ್ ಗಳಿಸಿ ಮಿಂಚಿದರು. ಇವರಿಗೆ 29 ರನ್ ಗಳಿಸಿದ ಏರಾನ್ ಫಿಂಚ್ ಉತ್ತಮ ಸಾಥ್ ನೀಡಿದರು. ಆದರೆ ಫಿಂಚ್ ಔಟಾದ ಬಳಿಕ ಬಂದ ನಾಯಕ ಕೊಹ್ಲಿ 14 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದೆಡೆ ಖ್ಯಾತಿಗೆ ತಕ್ಕ ಆಟವಾಡಿದ ಎಬಿಡಿ ವಿಲಿಯರ್ಸ್ 51 ‍ರನ್ ಗಳಿಸಿ ಕೊನೆಯ ಓವರ್ ನಲ್ಲಿ ದುರಾದೃಷ್ಟವಶಾತ್ ರನೌಟ್ ಆದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 19.4 ಓವರ್ ಗಳಲ್ಲಿ 153 ರನ್ ಗೆ ಆಲೌಟ್ ಆಯಿತು. ಆರಂಭಿಕ ಬೇರ್ ಸ್ಟೋ (61) ಮತ್ತು ಮನೀಶ್ ಪಾಂಡೆ (34) ಉತ್ತಮ ಆಟವಾಡಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ. ಪ್ರಮುಖವಾಗಿ ಆರ್ ಸಿಬಿ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಯಜುವೇಂದ್ರ ಚಾಹಲ್ 4 ಓವರ್ ಗಳಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು ಮೂರು ಪ್ರಮುಖ ವಿಕೆಟ್ ಕಬಳಿಸಿದರು. ಉಳಿದಂತೆ ನವದೀಪ್ ಸೈನಿ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಹಾಕಿ ವಿಶ್ವಕಪ್‌ ಮಹಾಸಮರ ನಾಳೆ ಶುರು: ಚಿನ್ನದ ಪದಕದ ಕನವರಿಕೆಯಲ್ಲಿ ಟೀಂ ಇಂಡಿಯಾ

IND vs SL: ಭಾರತ, ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

10ವರ್ಷಗಳ ಪ್ರೀತಿ, ಐವರು ಮಕ್ಕಳು ಜನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ

ಮುಂದಿನ ಸುದ್ದಿ
Show comments