ಐಪಿಎಲ್ 13: ಸಿಎಸ್ ಕೆ ಗೆಲುವಿನ ಜತೆಗೆ ದಾಖಲೆ ಮಾಡಿದ ಧೋನಿ

Webdunia
ಭಾನುವಾರ, 20 ಸೆಪ್ಟಂಬರ್ 2020 (08:57 IST)
ದುಬೈ: ಐಪಿಎಲ್ 13 ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ.


ಇನ್ನು, ಈ ಗೆಲುವಿನೊಂದಿಗೆ ಸಿಎಸ್ ಕೆ ನಾಯಕ ಧೋನಿ ಐಪಿಎಲ್ ನಲ್ಲಿ 100 ನೇ ಗೆಲುವು ಕಂಡ ನಾಯಕ ಎಂಬ ದಾಖಲೆಯನ್ನೂ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ರೋಹಿತ್ ಶರ್ಮಾ (12) ಬೇಗನೇ ಔಟಾಗಿದ್ದು ಆಘಾತ ನೀಡಿತು. ಆದರೆ ಇನ್ನೊಬ್ಬ ಆರಂಭಿಕ ಕ್ವಿಂಟನ್ ಡಿ ಕಾಕ್ 20 ಎಸೆತಗಳಲ್ಲಿ 33 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಸೌರಭ್ ತಿವಾರಿ 42 ರನ್ ಗಳಿಸಿದರು. ಚೆನ್ನೈ ಪರ ನಿಗಿಡಿ 3, ದೀಪಕ್ ಚಹರ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು 48 ಎಸೆತಗಳಲ್ಲಿ 71 ರನ್, ಫಾ ಡು ಪ್ಲೆಸಿಸ್ 44 ಎಸೆತಗಳಿಂದ 58 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಚೆನ್ನೈ 4 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಡುಗೆ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ ಮಾಡಿದ ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಶಶಾಂಕ್ ಸಿಂಗ್ Viral video

IND vs ENG: ಟೀಂ ಇಂಡಿಯಾ, ಇಂಗ್ಲೆಂಡ್ ಟಿ20 ಸರಣಿ ಯಾವಾಗ, ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ

ಗೌತಮ್ ಗಂಭೀರ್ ಮಾತ್ರ ಬೇಡಪ್ಪ.. ಟೀಂ ಇಂಡಿಯಾ ಕೋಚ್ ಗೆ ಐರ್ಲೆಂಡ್ ನಿಂದ ಎಂಥಾ ಅವಮಾನ

ICC Women’s T20 WC: ಭಾರತ ವನಿತೆಯರ ಸೋಲಿಗೆ ಇದೇ ಮೂರು ಕಾರಣ

ಸ್ಟಾರ್ ಸಂಸ್ಕೃತಿ ಕೊನೆಗಾಣಿಸ್ತೀನಿ ಎಂದು ಬಂದು ಟೀಂ ಇಂಡಿಯಾವನ್ನೇ ಫಿನಿಶ್ ಮಾಡಿದ್ರಲ್ಲೋ ಗಂಭೀರ್, ಅಗರ್ಕರ್

ಮುಂದಿನ ಸುದ್ದಿ
Show comments