ಐಪಿಎಲ್: ರಾಜಸ್ಥಾನಕ್ಕೆ ಶಾಕ್ ಕೊಟ್ಟ ಧೋನಿ, ಬ್ರಾವೋ

Webdunia
ಸೋಮವಾರ, 1 ಏಪ್ರಿಲ್ 2019 (09:30 IST)
ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಾಗಲೋಟಕ್ಕೆ ನಿನ್ನೆ ರಾಜಸ್ಥಾನ್ ರಾಯಲ್ಸ್ ಕಡಿವಾಣ ಹಾಕುತ್ತೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬ್ರಾವೋ ಮ್ಯಾಜಿಕ್ ಚೆನ್ನೈ ಗೆಲುವಿನ ಓಟ ಮುಂದುವರಿಯುವ ಹಾಗೆ ಮಾಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಶೋಷನೀಯ ಸ್ಥಿತಿಯಲ್ಲಿತ್ತು. ಒಂದು ಹಂತದಲ್ಲಿ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಇಂದು ಚೆನ್ನೈ ಕತೆ ಆರ್ ಸಿಬಿ ತಂಡದ ಹಾಗಾಗಿದೆ ಎಂದು ಅಭಿಮಾನಿಗಳು ಟ್ರೋಲ್ ಮಾಡಲು ಆರಂಭಿಸಿದ್ದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕನ ಆಟವಾಡಿದ ಧೋನಿ 46 ಎಸೆತಗಳಿಂದ 75 ರನ್ ಸಿಡಿಸಿದರೆ ಸುರೇಶ್ ರೈನಾ 36 ರನ್ ಗಳಿಸಿ ಅವರಿಗೆ ಉತ್ತಮ ಸಾಥ್ ನೀಡಿದರು. ಇವರ ಭರ್ಜರಿ ಆಟದಿಂದಾಗಿ ಚೆನ್ನೈ ನಿಗತಿದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಆರಂಭವೂ ಉತ್ತಮವಾಗಿರಲಿಲ್ಲ. ಆದರೆ ಕೆಳ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ 46 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸಿದ್ದರು. ಆದರೆ ಅಂತಿಮ ಓವರ್ ಎಸೆಯಲು ಬಂದ ಡ್ವಾನ್ ಬ್ರಾವೋ ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನವನ್ನು 167 ರನ್ ಗಳಿಗೆ ನಿಯಂತ್ರಿಸಿದರು. ಆ ಮೂಲಕ ಚೆನ್ನೈ ರೋಚಕವಾಗಿ 8 ರನ್ ಗಳಿಂದ ಸೋಲಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs MI: ಆರ್‌ಸಿಬಿ ವಿರುದ್ಧ ಮುಂಬೈ ವನಿತೆಯರಿಗೆ ಜಯ, ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ ಗೊತ್ತಾ

ರನ್‌ ಮಳೆ ಸುರಿಸುತ್ತಿರುವ ಅಭಿಷೇಕ್‌ ಬ್ಯಾಟನ್ನು ಅಚ್ಚರಿಯಿಂದ ವೀಕ್ಷಿಸಿದ ನ್ಯೂಜಿಲೆಂಡ್‌ ಆಟಗಾರರು

WPL 2026: ಆರ್‌ಸಿಬಿಗೆ ಇಂದು ನಿರ್ಣಯಕ ಪಂದ್ಯ, ಈ ಪಂದ್ಯ ಗೆದ್ದರೆ ನೇರ ಫೈನಲ್‌ಗೆ ಎಂಟ್ರಿ

ಗುರುವಿಗೆ ತಕ್ಕ ಶಿಷ್ಯನಂತೆ ಅಬ್ಬರಿಸಿದ ಅಭಿಷೇಕ್‌ ಶರ್ಮಾ: ಮತ್ತೆ ಪ್ರಜ್ವಲಿಸಿದ ಸೂರ್ಯ

3rd T20: ಏಕದಿನ ಸರಣಿಯ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments