Webdunia - Bharat's app for daily news and videos

Install App

ಟ್ವಿಟರ್ ನಲ್ಲೇ ಅಭಿಮಾನಿಯನ್ನು ಮುದ್ದಾಡಿದ ವಿರಾಟ್ ಕೊಹ್ಲಿ!

Webdunia
ಶುಕ್ರವಾರ, 19 ಮೇ 2017 (07:09 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅನೇಕ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. ಆದರೆ ಈಕೆ ಅಂತಿಂಥಾ ಅಭಿಮಾನಿಯಲ್ಲ. ಆಕೆಯ ಹೆಸರಿನಲ್ಲೇ ವಿಶೇಷತೆಯಿದೆ.


ಆಕೆ ಬೇರಾರೂ ಅಲ್ಲ. ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪುತ್ರಿ ಇಂಡಿಯಾ ರೋಡ್ಸ್. ಭಾರತದ ಮೇಲಿನ ಪ್ರೀತಿಯಿಂದ ಜಾಂಟಿ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಆಕೆಯ ಜನುಮ ದಿನಕ್ಕೆ ಸ್ವತಃ ಭಾರತದ ಪ್ರಧಾನಿ ಮೋದಿ ವಿಶ್ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಜಾಂಟಿ ಸದ್ಯಕ್ಕೆ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು,  ಭಾರತದಲ್ಲಿದ್ದಾರೆ. ಇದೀಗ ತಮ್ಮ ಪುತ್ರಿಯ ವಿರಾಟ್ ಪ್ರೀತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು ಕೊಹ್ಲಿ ಭಾವಚಿತ್ರದೊಂದಿಗೆ ನಿಂತಿರುವ ತಮ್ಮ ಪುತ್ರಿ ಭಾವಚಿತ್ರವನ್ನು ಪ್ರಕಟಿಸಿದ್ದಾರೆ. ಜತೆಗೆ ಕೊಹ್ಲಿ ಅಭಿಮಾನಿ ಬಳಗಕ್ಕೆ ಇನ್ನೊಬ್ಬರ ಸೇರ್ಪಡೆ ಎಂದು ಬರೆದಿದ್ದಾರೆ.

ಇದಕ್ಕೆ ಕೊಹ್ಲಿ ಕೂಡಾ ಪ್ರತಿಕ್ರಿಯಿಸಿದ್ದು, ಅಬ್ಬಾ… ಕ್ಯೂಟ್ ಹುಡುಗಿ. ಆಕೆಯ ಬ್ಯಾಗ್ ನಲ್ಲಿ ಏನಿದೆ ಎಂದು ತಿಳಿಯಬಹುದಾ ಎಂದು ಟ್ವಿಟರ್ ನಲ್ಲೇ ಮಗುವನ್ನು ಮುದ್ದಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments