ವಿರಾಟ್ ಕೊಹ್ಲಿ ಸಿಟ್ಟಿಗೆ ಬಲಿಯಾಯ್ತು ಆ ಸಿಕ್ಸರ್!

Webdunia
ಶುಕ್ರವಾರ, 28 ಏಪ್ರಿಲ್ 2017 (09:08 IST)
ಬೆಂಗಳೂರು: ವಿರಾಟ್ ಕೊಹ್ಲಿ ಎಂತಹಾ ಕೋಪಿಷ್ಠ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿರಾಟ್ ಸಿಟ್ಟಿನ ವಿರಾಟ ದರ್ಶನ ನಿನ್ನೆಯ ಪಂದ್ಯದ್ಲಲ್ಲಾಯಿತು.

 
ಸಾಮಾನ್ಯವಾಗಿ ಕೊಹ್ಲಿ ತಮ್ಮ ಅಸಮಧಾನವನ್ನು ಮೈದಾನದಲ್ಲಿಯೇ ಸಹ ಆಟಗಾರರ ಮೇಲೆ, ಎದುರಾಳಿಗಳ ವಿರುದ್ಧ ಹೊರ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ. ಹಾಗಾಗಿ ಎದುರಾಳಿಗಳು ಕೊಹ್ಲಿಯನ್ನು ಕೆಣಕಿ ಅವರ ಏಕಾಗ್ರತೆಗೆ ಭಂಗ ತರುವ ಯತ್ನ ನಡೆಸುತ್ತಾರೆ.

ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಸಿಟ್ಟು ಸಿಕ್ಸರ್ ರೂಪಕ್ಕೆ ತಿರುಗಿತು. ಅದು ನಡೆದಿದ್ದು ಎರಡನೇ ಓವರ್ ನಲ್ಲಿ. ಬಾಸಿಲ್ ತಂಪಿ ಅವರು ಬಾಲ್ ಮಾಡುತ್ತಿದ್ದರು. ಮೊದಲ ಬಾಲ್ ಡಾಟ್ ಬಾಲ್ ಆಗಿತ್ತು. ಎರಡನೇ ಬಾಲ್ ಕೊಹ್ಲಿ ಅಂದುಕೊಂಡಂತೆ ಬರಲಿಲ್ಲ. ಕೊಂಚ ವೈಡ್ ಆಗಿ ಲೆಗ್ ಸೈಡ್ ಕಡೆಯಿಂದ ಹಾರಿ ಸ್ಲಿಪ್ ನಲ್ಲಿದ್ದ ಫೀಲ್ಡರ್ ಕೈ ಸೇರಿತು.

ತಕ್ಷಣ ಎದುರಾಳಿಗಳು ಕ್ಯಾಚ್ ಗೆ ಮನವಿ ಸಲ್ಲಿಸಿದರು. ಆದರೆ ಕೊಹ್ಲಿಗೆ ಈ ಡ್ರಾಮಾ ನೋಡಿ ಸಿಟ್ಟು ಬಂತು. ಕುದಿಯುತ್ತಿದ್ದ ಕೊಹ್ಲಿ ಮುಂದಿನ ಬಾಲ್ ನ್ನು ಸಿಕ್ಸರ್ ಗೆ ಅಟ್ಟಿದರು. ಅದೊಂದು ವಿಶೇಷ ಹೊಡೆತವಾಗಿತ್ತು. ಸ್ಕ್ವೇರ್ ಲೆಗ್ ಕಡೆಗೆ ಬಾಲ್ ಫ್ಲಿಕ್ ಮಾಡಿ ಫ್ಲ್ಯಾಟ್ ಸಿಕ್ಸ್ ಹೊಡೆದರು.

ಅದೊಂದು ನಿಜಕ್ಕೂ ಮನಮೋಹಕ ಹೊಡೆತವಾಗಿತ್ತು. ಪ್ರೇಕ್ಷಕರ ಜತೆಗೆ ಎದುರಾಳಿ ಆಟಗಾರರು ಬಾಯಿ ತೆರೆದು ನೋಡುತ್ತಿದ್ದರು. ಹಾಗಿದ್ದರೂ ನಾಲ್ಕನೇ ಓವರ್ ನಲ್ಲಿ ತಂಪಿ ವಿರಾಟ್ ವಿಕೆಟ್ ಕಿತ್ತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

ಮುಂದಿನ ಸುದ್ದಿ
Show comments