ಕನ್ನಡಿಗರಿಲ್ಲದೆ ಆಡಿ ಸೋತ ಮುಂಬೈ ಇಂಡಿಯನ್ಸ್

Webdunia
ಶುಕ್ರವಾರ, 7 ಏಪ್ರಿಲ್ 2017 (08:51 IST)
ಪುಣೆ: ಐಪಿಎಲ್ 10 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ನಿನ್ನೆ ಪುಣೆ ಸೂಪರ್ ಜೈಂಟ್ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್ ಗಳಿಂದ ಸೋಲನುಭವಿಸಿದೆ. ನಾಲ್ವರು ಕನ್ನಡಿಗರನ್ನು ಹೊಂದಿದ್ದ ತಂಡದಲ್ಲಿ ಆಡಿದ್ದು ಮಯಾಂಕ್ ಅಗರ್ವಾಲ್ ಮಾತ್ರ.

 

ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ ಸ್ಟೀವ್ ಸ್ಮಿತ್ ಇಲ್ಲೂ ಮುಂದುವರಿಸಿ ಅರ್ಧಶತಕ ಗಳಿಸಿದರು. ಅಜಿಂಕ್ಯಾ ರೆಹಾನೆ ಜತೆಗೂಡಿ ಮುಂಬೈ ಇಂಡಿಯನ್ಸ್ ನೀಡಿದ್ದ 185 ರನ್ ಗಳ ಗುರಿಯನ್ನು ಸುಲಭವಾಗಿ ತಲುಪಿದರು.

 
ಕರ್ನಾಟಕದ ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಕಣಕ್ಕಿಳಿದರೂ ಗಳಿಸಿದ್ದು ಕೇವಲ 6 ರನ್. ಉಳಿದ ಕರ್ನಾಟಕದ ಆಟಗಾರರಿಗೆ ಅವಕಾಶ ಸಿಗಲಿಲ್ಲ. ಕೊನೆಯ ಓವರ್ ನಲ್ಲಿ 13 ರನ್ ಗಳ ಅಗತ್ಯವಿತ್ತು. ಮೊದಲ ಮೂರು ಎಸೆತದಲ್ಲಿ ಕೇವಲ 3 ರನ್ ಲಭಿಸಿತು. ಆದರೆ ಮುಂದಿನ ಎರಡು ಎಸೆತಗಳನ್ನು ಸತತವಾಗಿ ಸಿಕ್ಸರ್ ಎತ್ತಿ ನಾಯಕ ಸ್ಮಿತ್ ಗೆಲುವು ಕೊಡಿಸಿದರು. ಇನ್ನೊಂದು ತುದಿಯಲ್ಲಿ ಧೋನಿ 12 ರನ್ ಗಳಿಸಿ ಅಜೇಯರಾಗಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಾಷ್ಟ್ರೀಯ ತಂಡಕ್ಕೆ ಇಂದು ಪದಾರ್ಪಣೆ ಮಾಡ್ತಾರಾ ವೈಭವ್‌ ಸೂರ್ಯವಂಶಿ: ಸಚಿನ್‌ ದಾಖಲೆಗೆ ಕುತ್ತು

ಹರ್ಮನ್ ಪ್ರೀತ್ ಕೌರ್ ಗೆ ಕೈಕುಲುಕದೇ ಗತ್ತು ತೋರಿದ ಬಾಂಗ್ಲಾ ನಾಯಕಿ: ಇದಕ್ಕೆ ಹಳೆಯ ಧ್ವೇಷವೇ ಕಾರಣ

IND VS BAN T20WC: ಬಾಂಗ್ಲಾ ವಿರುದ್ಧ ಭಾರತದ ವನಿತೆಯರಿಗೆ ಅಮೋಘ ಜಯ

ಇಂಗ್ಲೆಂಡ್ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಇರಲಿದೆ ಪ್ರತ್ಯೇಕ ಚೇಂಜಿಂಗ್ ರೂಂ: ಕಾರಣವೇನು ಗೊತ್ತಾ

ಫಿಫಾ ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ರೊನಾಲ್ಡೊ: ಟೀಕಾಕಾರರಿಗೆ ಕಾಲಿನಿಂದಲೇ ದಿಟ್ಟ ಉತ್ತರ

ಮುಂದಿನ ಸುದ್ದಿ
Show comments