ಐಪಿಎಲ್: ಗುದ್ದಾಡಿ ಗೆದ್ದ ಸನ್ ರೈಸರ್ಸ್

Webdunia
ಮಂಗಳವಾರ, 18 ಏಪ್ರಿಲ್ 2017 (04:58 IST)
ಹೈದರಾಬಾದ್: ಗೆಲುವಿಗೆ ಬೇಕಾಗಿದ್ದಿದ್ದು ಕೇವಲ 160 ರನ್. ಆದರೂ ಪಂಜಾಬ್ ತಂಡಕ್ಕೆ ಅದು ಕಬ್ಬಿಣದ ಕಡಲೆಯಾಗಿತ್ತು. ಅಂತಿಮವಾಗಿ ಹೈದರಾಬಾದ್ ತಂಡ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ 5 ರನ್ ಗಳಿಂದ ಗೆಲುವು ಕಂಡಿತು.

 
ಹಾಲಿ ಚಾಂಪಿಯನ್ ತಂಡ ಸನ್ ರೈಸರ್ಸ್ ಹೈದರಾಬಾದ್ ಪರ ನಾಯಕನ ಆಟವಾಡಿದ ಡೇವಿಡ್ ವಾರ್ನರ್ 70 ರನ್ ಗಳಿಸಿದರು. ನಮಾನ್ ಓಝಾ 34 ರನ್ ಗಳಿಸಿದರು. ಅದು ಬಿಟ್ಟರೆ ಅವರಿಗೆ ರನ್ ಗತಿ ಹೆಚ್ಚಿಸುವಂತಹ ಬ್ಯಾಟ್ಸ್ ಮನ್ ಸಿಗಲಿಲ್ಲ. ಹೀಗಾಗಿ ನಿಗದಿತ 20 ಓವರ್ ಗಳಲ್ಲಿ 159 ರನ್ ಗಳಿಸಲಷ್ಟೇ ಶಕ್ತವಾಯಿತು.

ಆದರೆ ಹೈದರಾಬಾದ್ ಬೌಲರ್ ಗಳ ಶಿಸ್ತುಬದ್ಧ ದಾಳಿಗೆ ಪಂಜಾಬ್ ಆರಂಭಿಕ ಕುಸಿತ ಕಂಡಿತು. ಆಫ್ಘಾನಿಸ್ತಾನದ ಬೌಲರ್ ಗಳಾದ ಅಬ್ದುಲ್ ರಶೀದ್ ಮತ್ತು ಮೊಹಮ್ಮದ್ ನಬಿ ದಾಳಿಗೆ ಪಂಜಾಬ್ ದಿಕ್ಕಾಪಾಲಾಗಿತ್ತು. ಈ ಸಂದರ್ಭದಲ್ಲಿ ಮನನ್ ಓಹ್ರಾ ತಂಡಕ್ಕೆ ಆಸರೆಯಾದರು. ಅವರು ಇನ್ನೇನು ಗೆಲುವಿನ ದಡ ದಾಟಿಸಿಯೇ ಬಿಟ್ಟರು ಎನ್ನುವಾಗ ಭುವನೇಶ್ವರ ಕುಮಾರ್ ವಿಕೆಟ್ ಕಿತ್ತರು.

ಅಂತಿಮವಾಗಿ ಪಂಜಾಬ್ ಗೆ ಐದು ಬಾಲ್ ಗಳಿಂದ 9 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಅಂತಿಮ ಜೋಡಿ ಇಶಾಂತ್ ಶರ್ಮಾ ಮತ್ತು ಸಂದಿಪ್ ಶರ್ಮಾ ತಂಡವನ್ನು ಗೆಲುವಿನ ದಡ ಸೇರಿಸಲಾಗದೇ ನಿರಾಸೆ ಅನುಭವಿಸಿತು.  19.4 ಓವರ್ ಗಳಲ್ಲಿ ಆಲೌಟ್ ಆದ ಪಂಜಾಬ್ ಕೇವಲ 5 ರನ್ ಗಳಿಂದ ಸೋಲೊಪ್ಪಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐಗೆ ಈ ರೀತಿ ಕೌಂಟರ್ ಕೊಟ್ರಾ ಸೂರ್ಯಕುಮಾರ್ ಯಾದವ್ , ಏನಿದು ಟೀ ಶರ್ಟ್‌ ಸಂದೇಶ

ವಿಡಿಯೊ: ಸ್ವಿಟ್ಜರ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮೆಸ್ಸಿ ಪಡೆ

ಸ್ವಲ್ಪನಾದ್ರೂ ನಾಚಿಕೆ ಇದ್ರೆ... ಗೌತಮ್ ಗಂಭೀರ್ ಹಳೇ ಹೇಳಿಕೆಯನ್ನೇ ತಿರುಗಿಸಿ ಟಾಂಗ್ ಕೊಟ್ಟ ಫ್ಯಾನ್ಸ್

IND vs ENG Test: ಕ್ರಾಂತಿ ಗೌಡ್‌ ಬಿರುಗಾಳಿಗೆ ಕುಸಿದ ಇಂಗ್ಲೆಂಡ್‌: ಭಾರತಕ್ಕೆ 115 ರನ್​ಗಳ ಮುನ್ನಡೆ

IND VS ENG T20: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ, Video

ಮುಂದಿನ ಸುದ್ದಿ
Show comments