Select Your Language

Notifications

webdunia
webdunia
webdunia
webdunia

(Viral Videi) ಐಪಿಎಲ್ ಪಂದ್ಯದ ವೇಳೆ ಕನ್ನಡದಲ್ಲಿ ಮಾತನಾಡಿದ ಮನೀಶ್ ಪಾಂಡೆ

(Viral Videi) ಐಪಿಎಲ್ ಪಂದ್ಯದ ವೇಳೆ ಕನ್ನಡದಲ್ಲಿ ಮಾತನಾಡಿದ ಮನೀಶ್ ಪಾಂಡೆ
, ಗುರುವಾರ, 27 ಏಪ್ರಿಲ್ 2017 (09:12 IST)
ನಿನ್ನೆ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಕೋಲ್ಕತ್ತಾ ತಂಡದಲ್ಲಿರುವ  ಕನ್ನಡಿಗರಾದ ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ ಜೊತೆ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಫೀಲ್ಡಿಂಗ್ ಮಾಡುತ್ತಿದ್ದ ಮನೀಶ್ ಪಾಂಡೆ ಕನ್ನಡದಲ್ಲಿ ಉತ್ತಪಗೆ ಉತ್ತರ ನೀಡಿದ್ದಾರೆ. ಮಾಮ್ ಬಾಲ್ ಬಂದರೆ ಇಲ್ಲೆ ಬರುತ್ತೆ ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಮನೀಶ್ ಅವರ ೀ ಮಾತುಗಳು ವೈರಲ್ ಆಗಿವೆ.

ಇದಕ್ಕೂ ಕುತೂಹಲಕಾರಿ ಅಂಶವೆಂದರೆ ಕಾಮೆಂಟೇಟರ್ ಭಾಷೆಯನ್ನ ಗುರ್ತಿಸಿ ಕನ್ನಡ ದಟ್ ಈಸ್ ಕನ್ನಡ ರೈಟ್ ಎಂದು ಖುಷಿ ಪಟ್ಟಿದ್ದಾರೆ. ಎದುರಾಳಿಗಳಿಗೆ ತಮ್ಮ ಟ್ರಕ್ಸ್ ಗೊತ್ತಾಗಬಾರದೆಂದು ಈ ರೀತಿ ಆಟಗಾರರು ಅವರ ಮಾತೃಭಾಷೆಯಲ್ಲಿ ಕೆಲವೊಮ್ಮೆ ಮಾತನಾಡುತ್ತಾರೆ ಎಂದು ಹೇಳುವುದೂ ಉಂಟು.

ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕನ್ನಡಿಗರಾದ ಜಾವಗಲ್ ಶ್ರೀನಾಥ್, ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದರು.  ಒಬ್ಬರಿಗೊಬ್ಬರು ಕನ್ನಡದಲ್ಲೇ ಸಲಹೆ, ಸೂಚನೆ ನೀಡುತ್ತಿದ್ದರು. ಒಟ್ಟಿನಲ್ಲಿ ಮನೀಶ್ ಪಾಂಡೆಯ ಕನ್ನಡ ಪ್ರೀತಿ ಕನ್ನಡಿಗರಿಗೆ ಖುಷಿ ತಂದಿರುವುದಂತೂ ಸತ್ಯ.



Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ವೃತ್ತಿ ಬದುಕು ಮೊಟಕುಗೊಳಿಸಿದ್ದು ಗ್ರೆಗ್ ಚಾಪೆಲ್ ಅಲ್ಲ ಎಂದ ಕ್ರಿಕೆಟಿಗ