ಮುಂಬೈ: ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ನಿರೂಪಕಿ ಅರ್ಚನಾ ವಿಜಯ್ ರ ಹರಿದ ಜೀನ್ಸ್ ನೋಡುತ್ತಿರುವ ಫೋಟೋ ಭಾರೀ ವೈರಲ್ ಆಗಿದ್ದು ನೆನಪಿದೆಯಲ್ವಾ? ಆ ಫೋಟೋಗೆ ಇದೀಗ ಸ್ವತಃ ಅರ್ಚನಾ ಸ್ಪಷ್ಟನೆ ಕೊಟ್ಟಿದ್ದಾರೆ.
ಆ ಫೋಟೋದಲ್ಲಿ ದೇವರಾಣೆ ಕೊಹ್ಲಿ ನನ್ನ ಕಾಲು ನೋಡುತ್ತಿರಲಿಲ್ಲ. ಆತ ನನ್ನ ಕೈಯಲ್ಲಿದ್ದ ಕಾರ್ಡ್ ನೋಡುತ್ತಿದ್ದ. ಯಾಕೆಂದರೆ ಆವತ್ತು ಶೋನಲ್ಲಿ ನಾನು ರಾಪಿಡ್ ಫಯರ್ ಪ್ರಶ್ನೆ ರೌಂಡ್ ಮಾಡುತ್ತಿದ್ದೆ.
ಆಗ ಕ್ಲೂ ಗಾಗಿ ಕೊಹ್ಲಿ ನನ್ನ ಕೈಯಲ್ಲಿದ್ದ ಕಾರ್ಡ್ ನಲ್ಲಿ ಏನು ಉತ್ತರವಿದೆ ಎಂದು ಕದ್ದು ನೋಡುತ್ತಿದ್ದರು. ಆಗ ಫೋಟೋಗ್ರಾಫರ್ ಫೋಟೋ ಕ್ಲಿಕ್ಕಿಸಿದ್ದ. ಅದನ್ನೇ ಎಲ್ಲರೂ ತಪ್ಪಾಗಿ ಭಾವಿಸಿದರು.
ಅಸಲಿಗೆ ಕೊಹ್ಲಿ ಯಾವ ಕೆಟ್ಟ ಉದ್ದೇಶದಿಂದಲೂ ನನ್ನ ನೋಡಿರಲಿಲ್ಲ. ನಮ್ಮ ನಡುವೆ ತುಂಬಾ ಆತ್ಮೀಯತೆಯಿದೆ. ಅಂತಹ ನಮ್ಮ ಬಗ್ಗೆ ಈ ರೀತಿ ಸುದ್ದಿ ಮಾಡಿದ್ದು ಸರಿಯಲ್ಲ ಎಂದು ಅರ್ಚನಾ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ