ವಾಷಿಂಗ್ಟನ್: ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಸಂದರ್ಭದಲ್ಲಿ ಅಮೆರಿಕಾ ಗಾರ್ಡ್ ಒಬ್ಬರು ನಡೆದುಕೊಂಡ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ.
ಶ್ವೇತಭವನಕ್ಕೆ ಪ್ರಧಾನಿ ಮೋದಿಯ ಕಾರು ಬರುತ್ತಿದ್ದಂತೆ ಕಾರಿನ ಎರಡೂ ಬದಿಯಲ್ಲಿ ನಿಂತಿದ್ದ ಗಾರ್ಡ್ ಗಳು ಸೆಲ್ಯೂಟ್ ಹೊಡೆದು ಕಾರು ಬಾಗಿಲು ತೆರೆಯುತ್ತಾರೆ. ಸಾಮಾನ್ಯವಾಗಿ ವಿಶ್ವ ನಾಯಕರ ಜತೆಗೆ ಅವರ ಪತ್ನಿಯೂ ಆಗಮಿಸುತ್ತಾರೆ.
ಬಹುಶಃ ಈ ಗಾರ್ಡ್ ಕೂಡಾ ಅದೇ ನಿರೀಕ್ಷೆಯಲ್ಲಿದ್ದರೇನೋ. ಅಥವಾ ಅವರಿಗೆ ಪ್ರಧಾನಿ ಮೋದಿಗೆ ಪತ್ನಿಯಿಲ್ಲ ಎಂಬ ವಿಚಾರ ಗೊತ್ತಿಲ್ಲವೋ ಏನೋ. ಸಾಮಾನ್ಯವಾಗಿ ನಾಯಕರು ಕಾರಿನ ಬಲ ಭಾಗದಲ್ಲಿರುತ್ತಾರೆ. ಹಾಗೆಯೇ ಬಲ ಭಾಗದಲ್ಲಿದ್ದ ಗಾರ್ಡ್ ಬಾಗಿಲು ತೆಗೆದು ಮೋದಿಗೆ ಸೆಲ್ಯೂಟ್ ಹೊಡೆದಿದ್ದ.
ಆದರೆ ಎಡಬದಿಯಲ್ಲಿದ್ದ ಗಾರ್ಡ್ ಬಹುಶಃ ಪ್ರಧಾನಿ ಪತ್ನಿಯ ನಿರೀಕ್ಷೆಯಲ್ಲಿ ಎಡಭಾಗದ ಕಾರು ಬಾಗಿಲನ್ನು ಹಾಗೂ ಹೀಗೂ ಪರದಾಡಿ ತೆಗೆದು ನಿಂತ. ಆದರೆ ಆ ಬದಿಯಿಂದ ಯಾರೂ ಇಳಿಯಲೇ ಇಲ್ಲ. ಈ ವಿಚಾರ ಇದೀಗ ಟ್ವಿಟರಿಗರಿಗೆ ತಮಾಷೆಯ ವಸ್ತುವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ