ಜಗತ್ತಿನ ಮೊದಲ ಯೂನಿಸೆಕ್ಸ್ ಕಾಂಡೋಮ್ಗಳನ್ನ ತಯಾರಿಸಲಾಗಿದ್ದು, ಇದು ಡಿಸೆಂಬರ್ನಿಂದ ಆನ್ಲೈನ್ನಲ್ಲಿ ಖರೀದಿಗೆ ಲಭ್ಯವಾಗೋ ಸಾಧ್ಯತೆ ಇದೆ.ಅನಪೇಕ್ಷಿತ ಗರ್ಭಾವಸ್ಥೆಯನ್ನ ತಪ್ಪಿಸುವ ಸಲುವಾಗಿ ಸಾಮಾನ್ಯವಾಗಿ ಕಾಂಡೋಮ್ಗಳನ್ನ ಬಳಸಲಾಗುತ್ತೆ. ಆದ್ರೆ ಮಲೇಷಿಯಾದ ಪ್ರಸೂತಿ ತಜ್ಞರೊಬ್ಬರು ಸಿದ್ಧಪಡಿಸಿರುವ ಕಾಂಡೋಮ್ಗಳು ಬೇರೆ ಬ್ರ್ಯಾಂಡ್ಗಳಿಗಿಂತ ವಿಶೇಷವಾಗಿದೆ. ಮಲೇಷಿಯಾದ ವೈದ್ಯರಾದ ಜಾನ್ ತಾಂಗ್ ಇಂಗ್ ಚಿನ್ನ್, ಇದೇ ಮೊದಲ ಬಾರಿಗೆ ವಂಡರ್ಲೀಫ್ ಹೆಸರಿನ ಯೂನಿಸೆಕ್ಸ್ ಕಾಂಡೋಮ್ಗಳನ್ನ ತಯಾರಿಸಿದ್ದು, ಇದನ್ನ ಪುರುಷರಲ್ಲದೇ ಮಹಿಳೆಯರೂ ಬಳಸಬಹುದು ಅಂತ ತಿಳಿಸಿದ್ದಾರೆ. ಮೆಡಿಕಲ್ ಬಳಕೆಗಾಗಿ ಈ ಕಾಂಡೋಮ್ಗಳನ್ನ ತಯಾರಿಸಲಾಗಿದ್ದು, ಈಗಾಗಲೇ ಹಲವು ಹಂತಗಳಲ್ಲಿ ಯಶಸ್ವಿ ಪ್ರಯೋಗಗಳನ್ನ ಮಾಡಲಾಗಿದೆ. ಡಿಸೆಂಬರ್ನಿಂದ ಆನ್ಲೈನ್ನಲ್ಲಿ ಗ್ರಾಹಕರಿಗೆ ಇದು ಲಭ್ಯವಿರಲಿದೆ ಅಂತ ಜಾನ್ ಮಾಹಿತಿ ನೀಡಿದ್ದಾರೆ.