Select Your Language

Notifications

webdunia
webdunia
webdunia
webdunia

ಕಾಶ್ಮೀರ ಭಾರತದ ಭಾಗವಲ್ಲ, ಒಂದು ವಿವಾದಿತ ಪ್ರದೇಶ: ಪಾಕ್

ಕಾಶ್ಮೀರ ಭಾರತದ ಭಾಗವಲ್ಲ, ಒಂದು ವಿವಾದಿತ ಪ್ರದೇಶ: ಪಾಕ್
ಇಸ್ಲಾಮಾಬಾದ್ , ಬುಧವಾರ, 20 ಆಗಸ್ಟ್ 2014 (18:09 IST)
ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಭಾರತ ರದ್ದು ಪಡಿಸಿದ ಒಂದು ದಿನದ ತರುವಾಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಾಕ್, ನಾವು ನವದೆಹಲಿಗೆ ಆಧೀನರಾಗಿಲ್ಲ. ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವಲ್ಲಿ ನಾವು ಕೂಡ ಸಮಾನ ಪಾಲುದಾರಿಕೆ ಹೊಂದಿದ್ದೇವೆ’ ಎಂದು  ಹೇಳಿದೆ.

ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ  ಎಂದು ವಾದಿಸಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರೆ ತಸ್ನಿಂ ಅಸ್ಲಾಂ, ಕಾಶ್ಮೀರ ಭಾರತದ ಭಾಗವಲ್ಲ ಎಂದು ಹೇಳಿದ್ದಾರೆ.
 
‘ ಹುರಿಯತ್‌ ನಾಯಕರ ಜತೆ ಪಾಕಿಸ್ತಾನ ಮಾತುಕತೆ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲ ದಶಕಗಳಿಂದ ಇದು ನಡೆದುಕೊಂಡು ಬಂದಿದೆ. ಇದರಲ್ಲಿ ಹೊಸದೇನಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.
 
ಪಾಕಿಸ್ತಾನದ ರಾಯಭಾರಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ಪಾಕಿಸ್ತಾನ ಭಾರತಕ್ಕೆ ಅಧೀನವಾಗಿಲ್ಲ. ಇದು ಒಂದು ಸಾರ್ವಭೌಮ ರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ವಿವಾದದಲ್ಲಿ ಕಾನೂನುಬದ್ಧ ಪಾಲುದಾರ"  ಎಂದು ಅವರು ಹೇಳಿದ್ದಾರೆ.
 
ಈ ಹಿಂದೆ ಭಾರತದಲ್ಲಿ ಸೇವೆ ಸಲ್ಲಿಸಿದ್ದ ಅಸ್ಲಾಂ, "ಕಾಶ್ಮೀರ ಭಾರತದ ಭಾಗವಲ್ಲ". ಇದು ಒಂದು ವಿವಾದಿತ ಪ್ರದೇಶ.  ಈ ಕುರಿತು ವಿಶ್ವಸಂಸ್ಥೆ  ‘ಭಾರತದ ಈ ನಿರ್ಣಯದಿಂದ ಉಭಯ ರಾಷ್ಟ್ರಗಳ ಸ್ನೇಹ ಸಂಬಂಧ ವೃದ್ಧಿ ಪ್ರಯತ್ನಗಳಿಗೆ ಭಾರಿ ಹಿನ್ನಡೆಯಾಗಿದೆ’ ಎಂದು  ಪಾಕ್ ಸೋಮವಾರ ಹೇಳಿತ್ತು.

Share this Story:

Follow Webdunia kannada