Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್ ಬೀದಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳದ ವಿಡಿಯೋ ಬಿಡುಗಡೆ

ನ್ಯೂಯಾರ್ಕ್ ಬೀದಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳದ ವಿಡಿಯೋ ಬಿಡುಗಡೆ
ನ್ಯೂಯಾರ್ಕ್ , ಶುಕ್ರವಾರ, 31 ಅಕ್ಟೋಬರ್ 2014 (12:33 IST)
ಭಾರತದಲ್ಲಿ ಮಾತ್ರ ಲೈಂಗಿಕ ಕಿರುಕುಳ ಹೆಚ್ಚಾಗಿ ನಡೆಯುತ್ತಿರಬಹುದು. ಆದರೆ ನ್ಯೂಯಾರ್ಕ್ ಬೀದಿಗಳಲ್ಲಿ ಕೂಡ ಯುವತಿಯರಿಗೆ ಲೈಂಗಿಕ ಕಿರುಕುಳ, ಚುಡಾಯಿಸುವ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ವಿಡಿಯೋ ದೃಶ್ಯಗಳು ಸಾಕ್ಷ್ಯವೊದಗಿಸಿದೆ. ನ್ಯೂಯಾರ್ಕ್ ಬೀದಿಯಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಗೆ ಈಗ ಅತ್ಯಾಚಾರದ ಬೆದರಿಕೆ ಕರೆಗಳು ಆನ್‌ಲೈನ್ ಮೂಲಕ ಬರುತ್ತಿವೆ ಎಂದು ಕಿರುಚಿತ್ರವನ್ನು ತಯಾರಿಸಿದ ಸಂಸ್ಥೆ ಹೋಲಾಬ್ಯಾಕ್ ತಿಳಿಸಿದೆ. 
 
'ಮಹಿಳೆಯಾಗಿ ನ್ಯೂಯಾರ್ಕ್ ಬೀದಿಯಲ್ಲಿ 10 ಗಂಟೆಗಳ ವಾಕಿಂಗ್' ಎಂಬ ಶೀರ್ಷಿಕೆಯ ಈ ವಿಡಿಯೋವನ್ನು ಮಂಗಳವಾರ ಅಪಲೋಡ್ ಮಾಡಲಾಗಿದ್ದು, 10 ಲಕ್ಷ ಬಾರಿ ಇದನ್ನು ವೀಕ್ಷಿಸಲಾಗಿದೆ. ಶೋಶಾನಾ ಬಿ ರಾಬರ್ಟ್ಸ್ ಎಂಬ ಮಹಿಳೆ ನ್ಯೂಯಾರ್ಕ್ ಬೀದಿಯಲ್ಲಿ ವಾಕಿಂಗ್ ಮಾಡುವಾಗ  ಅವಳ ಎದುರಿಗೆ ಬ್ಯಾಕ್‌ಪ್ಯಾಕ್‌ನಲ್ಲಿ ಅಡಗಿಸಲಾಗಿದ್ದ ಕ್ಯಾಮೆರಾದಲ್ಲಿ ರಹಸ್ಯವಾಗಿ ಚಿತ್ರೀಕರಿಸಿಕೊಳ್ಳಲಾಯಿತು.

ಈ ಬ್ಯಾಕ್‌ಪ್ಯಾಕನ್ನು ರಾಬ್ ಬ್ಲಿಸ್ ಎಂಬ ವ್ಯಕ್ತಿ ಒಯ್ದಿದ್ದ. ತನ್ನ ಗೆಳತಿ ನ್ಯೂಯಾರ್ಕ್ ಬೀದಿಗಳಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳವನ್ನು ಗಮನಿಸಿದ್ದ ಬ್ಲಿಸ್ ಈ ಉಪಾಯವನ್ನು ಮಾಡಿದ್ದ. 
 
 ಜೀನ್ಸ್‌ಧರಿಸಿ ಬಿಗ್ ಆಪಲ್  ಬೀದಿಯಲ್ಲಿ ವಾಕಿಂಗ್ ಮಾಡುತ್ತಿದ್ದ ರಾಬರ್ಟ್ಸ್‌ಗೆ ವಿವಿಧ ಅಪರಿಚಿತರು ಸುಮಾರು 100 ಕ್ಯಾಟ್ ಕಾಲ್‌ಗಳನ್ನು ಮಾಡಿದ್ದರು.ರಾಬರ್ಟ್ಸ್‌ನತ್ತ ಕೆಲವು ಪುರುಷರು ಕೂಗಿದರೂ ಅದಕ್ಕೆ ಅವಳು ಪ್ರತಿಕ್ರಿಯಿಸಿರಲಿಲ್ಲ. ಒಬ್ಬ ಪುರುಷ, ರಾಬರ್ಟ್ಸ್‌ಗೆ 'ನಿನಗೆ ಮಾತನಾಡಲು ಇಷ್ಟವಿಲ್ಲವೇ, ನಾನು ನಂಬರ್ ಕೊಟ್ಟರೆ ಮಾತನಾಡುತ್ತೀಯಾ' ಎಂದು ಕೇಳಿದ್ದ.  ಈ ವಿಡಿಯೋ ಅಪ್‌ಲೋಡ್ ಆದ ಕೂಡಲೇ ರಾಬರ್ಟ್ಸ್ ವಿಡಿಯೋದ ಯೂ ಟ್ಯೂಬ್ ಕಾಮೆಂಟ್ ಬೋರ್ಡ್‌ನಲ್ಲಿ ಅತ್ಯಾಚಾರದ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾಳೆ. 

Share this Story:

Follow Webdunia kannada