Select Your Language

Notifications

webdunia
webdunia
webdunia
webdunia

ಜಪಾನ್ ಕ್ಯೋಟೊ ಮಾದರಿಯಲ್ಲಿ ವಾರಾಣಸಿ ಅಭಿವೃದ್ಧಿ

ಜಪಾನ್ ಕ್ಯೋಟೊ ಮಾದರಿಯಲ್ಲಿ ವಾರಾಣಸಿ ಅಭಿವೃದ್ಧಿ
ಟೋಕಿಯೋ , ಶನಿವಾರ, 30 ಆಗಸ್ಟ್ 2014 (18:40 IST)
ಕ್ಯೋಟೋ: ಹಳೆಕಾಲದ ನಗರ ವಾರಾಣಸಿಯನ್ನು ಜಪಾನ್‌ನ ಸ್ಮಾರ್ಟ್ ಸಿಟಿ ಕ್ಯೋಟೋದ ಅನುಭವ ಬಳಸಿಕೊಂಡು ಅಭಿವೃದ್ಧಿಪಡಿಸಲು ಭಾರತ ಮತ್ತು ಜಪಾನ್ ಒಪ್ಪಂದಕ್ಕೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಸಮ್ಮುಖದಲ್ಲಿ  ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
 
ಲೋಕಸಭೆಯಲ್ಲಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿಯನ್ನು ಕ್ಯೋಟೊ ಮಾದರಿಯಲ್ಲಿ ಸ್ಮಾರ್ಟ್ ನಗರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮೋದಿ ಜಪಾನ್‌ಗೆ ಆಗಮಿಸಿದ ತಕ್ಷಣವೇ ಸಹಿ ಹಾಕಲಾದ ಒಪ್ಪಂದದಲ್ಲಿ ಪರಂಪರೆ ರಕ್ಷಣೆ, ನಗರ ಆಧುನೀಕರಣ ಮತ್ತು ಕಲೆ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಹಕಾರ ಒದಗಿಸಲಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದರು.

ಇದು ಉಭಯ ರಾಷ್ಟ್ರಗಳ ನಡುವೆ ಸ್ಮಾರ್ಟ್ ಪಾರಂಪರಿಕ ನಗರ ಕಾರ್ಯಕ್ರಮಕ್ಕೆ ಚೌಕಟ್ಟು ಒದಗಿಸುತ್ತದೆ ಎಂದು ಅವರು ಹೇಳಿದರು.ಪ್ರಧಾನಿ ಅವರು ಭಾರತದ ನಗರಗಳ ಪುನಶ್ಚೇತನ ಮುನ್ನೋಟ ಹೊಂದಿರುವುದರಿಂದ  ಬೌದ್ಧ ಸಂಸ್ಕೃತಿಯೊಂದಿಗೆ ಪಾರಂಪರಿಕ ನಗರವಾದ ಕ್ಯೋಟೋಗೆ ಪ್ರಧಾನಿ ಭೇಟಿ ವಿಶೇಷ ಸಾಂಕೇತಿಕತೆ ಒದಗಿಸಿದೆ.   ಭೋಜನಕೂಟಕ್ಕೆ ಮುನ್ನ ಮೋದಿ ಮತ್ತು ಅಬೆ ಮೀನಿಗೆ ಆಹಾರ ನೀಡುವ ವಿಶೇಷ ಆಚರಣೆಯಲ್ಲಿ ಭಾಗವಹಿಸಿದರು.

Share this Story:

Follow Webdunia kannada