ವಾಷಿಂಗ್ಟನ್: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ತನ್ನ ನೀಚ ಬುದ್ಧಿಯನ್ನು ಬಿಡಲಿಲ್ಲವೆಂದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಮೆರಿಕಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರವಾದವನ್ನು ಮಟ್ಟಹಾಕದಿದ್ದರೆ ಅಮೆರಿಕಾ ಏಕಾಂಗಿಯಾಗಿ ಉಗ್ರರ ವಿರುದ್ಧ ಹೋರಾಡಲು ಸಿದ್ಧವಿದೆ ಎಂದು ಪರೋಕ್ಷವಾಗಿ ಚಾಟಿ ಬೀಸಿದೆ. ಅಲ್ಲದೇ ಈ ಬಗ್ಗೆ ಅಮೆರಿಕದ ಭಯೋತ್ಪಾದನಾ ನಿಗ್ರಹ ದಳ, ಪಾಕಿಸ್ತಾನದ ಸರಕಾರ ಹಾಗೂ ದೇಶದ ಗುಪ್ತಚರ ಇಲಾಖೆ ಐಎಸ್ಐ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳಿಂದ ಉಗ್ರರ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
ಪಾಕ್ ನಾಶಕ್ಕೆ ಅಮೆರಿಕಾ ಒಂದೇ ಸಾಕು
ಪಾಕ್ ನಲ್ಲಿನ ಭಯೋತ್ಪಾದನೆ ಕಡಿಮೆಗೊಳ್ಳದಿದ್ದರೆ ನಾನು ಮಧ್ಯೆ ಪ್ರವೇಶಿಸಬೇಕಾಗುತ್ತದೆ. ಭಾರತದೊಂದಿಗಿನ ದಾಳಿ ಕುರಿತು ಪಾಕಿಸ್ತಾನದ ನಂಟಿರುವ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮರ್ಯಾದೆ ಮೂರು ಕಾಸಿಗೆ ಹರಾಜಾಗಿದೆ. ಇನ್ನಾದ್ರೂ ಪಾಕ್ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಆಗುವ ಅನಾಹುತಕ್ಕೆ ತಾನೇ ಕೊರಳೊಡ್ಡಬೇಕಾಗುತ್ತದೆ. ಅಲ್ಲದೇ ಪಾಕ್ ಮೇಲೆ ಯುದ್ಧ ಸಾರಲು ಅಮೆರಿಕೆ ಯಾವುದೇ ರೀತಿಯ ಅಳುಕಿಲ್ಲದೇ ಕ್ರಮ ಕೈಗೊಳ್ಳುತ್ತೆ ಎಂದಿದೆ. ಇನ್ನು ಮುಂದೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾವು ಎಂದೂ ಪಾಕಿಸ್ತಾನಕ್ಕೆ ಆಗ್ರಹಿಸುವುದಿಲ್ಲ. ಅನಿವಾರ್ಯ ಅಥವಾ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಉಗ್ರ ನೆಲೆಗಳ ಮೇಲೆ ದಾಳಿ ಮಾಡಲೂ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ಸಂದೇಶ ನೀಡಿದೆ.
ಪಾಕ್ ಗೆ ಇನ್ನೂ ಕಾಲಾವಕಾಶವಿದೆ
ಉಗ್ರ ನಿಗ್ರಹಕ್ಕೆ ಪಾಕ್ ಪಣತೊಡಲು ಮುಂದಾದರೆ, ನಾನೇ ಬೆಂಬಲ ಘೋಷಿಸುತ್ತೇನೆ ಎಂದು ಅಮೆರಿಕಾ ತಿಳಿಸಿದೆ. ತನ್ನ ದೇಶದಲ್ಲಿ ಉಗ್ರರ ಚಟುವಟಿಕೆ ಹಾಗೂ ದುಷ್ಕೃತ್ಯ ನಡೆಸದಂತೆ ತಾಕೀತು ಹಾಗೂ ಉಗ್ರ ಸಂಘಟನೆಗಳನ್ನು ದೇಶಾದ್ಯಂತ ಬ್ಯಾನ್ ಮಾಡಲಿ ಎಂದು ಸಲಹೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ