Webdunia - Bharat's app for daily news and videos

Install App

ಪ್ಯಾರಿಸ್ ಒಪ್ಪಂದದಿಂದ ಹೊರಬಂದ ಅಮೆರಿಕ

Webdunia
ಶುಕ್ರವಾರ, 2 ಜೂನ್ 2017 (12:21 IST)
ನ್ಯೂಯಾರ್ಕ್:ಪ್ಯಾರಿಸ್‌ ಜಾಗತಿಕ ಹವಾಮಾನ ಒಪ್ಪಂದದಿಂದ ಹೊರಬರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಒಪ್ಪಂದದಿಂದ  ಚೀನಾ, ಭಾರತದಂತಹ ದೇಶಗಳು ಅತ್ಯಂತ ಲಾಭ ಪಡೆದುಕೊಳ್ಳಲಿವೆ. ಆದರೆ ಒಪ್ಪಂದದಿಂದ ಅಮೆರಿಕಾದ ವ್ಯಾಪಾರ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುವುದರಿಂದ ತಮ್ಮ ದೇಶಕ್ಕೆ ಪ್ಯಾರಿಸ್ ಒಪ್ಪಂದದ ಅಗತ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
 
ಬರಾಕ್ ಒಬಾಮಾ ಸರ್ಕಾರ ಮಾಡಿಕೊಂಡಿದ್ದ  ಒಪ್ಪಂದದಲ್ಲಿ ಬದಲಾವಣೆ ಮಾಡಲು ಅವಕಾಶವಿತ್ತು ಎಂದು ಪ್ರತಿಪಾದಿಸಿದ್ದಾರೆ. ಪ್ಯಾರಿಸ್ ಒಪ್ಪಂದದಡಿ ತನ್ನ ಬದ್ಧತೆಯನ್ನು ಈಡೇರಿಸಲು ಭಾರತ ಶತಕೋಟಿ ಡಾಲರ್ ಪಡೆದುಕೊಳ್ಳಲಿದೆ. ಮಾತ್ರವಲ್ಲದೆ ಚೀನಾದೊಂದಿಗೆ 2020 ರ ವೇಳೆಗೆ ಕಲ್ಲಿದ್ದಲು ಆಧಾರಿತ ಇಂಧನ ಘಟಕಗಳಿಗೆ ದ್ವಿಗುಣ ಮೊತ್ತದ ಹಣ ಪಡೆದುಕೊಳ್ಳಲಿದೆ ಎಂದಿದ್ದಾರೆ.
 
ಅಮೆರಿಕಾದ ನಿರ್ಧಾರವನ್ನು ವಿಶ್ವದ ಹಲವು ಮುಖಂಡರು ಖಂಡಿಸಿದ್ದಾರೆ. ಫ್ರಾನ್ಸ್, ಜರ್ಮನಿ ಮತ್ತು ಇಟೆಲಿ ದೇಶಗಳ ನಾಯಕರು ಟ್ರಂಪ್ ನಿರ್ಧಾರ ಸರೊಯಲ್ಲ ಎಂದಿದ್ದಾರೆ. ಇನ್ನು ಬರಾಕ್ ಒಬಾಮ ಕೂಡ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಟೀಕಿಸಿದ್ದು, ಇದರಿಂದ ಟ್ರಂಪ್ಸ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
 
190ಕ್ಕೂ ಅಧಿಕ ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ನಾವು ಅಪಾಯದಲ್ಲಿಲ್ಲ, ನಾವೇ ಅಪಾಯಕಾರಿಗಳು: ಟ್ರೆಂಡ್ ಆಗ್ತಿದೆ ಸ್ಲೋಗನ್

Operation Sindoor: ಇಡೀ ದೇಶ ಹೆಮ್ಮೆಪಡುವಾಗ ರಾಹುಲ್ ಗಾಂಧಿ, ಖರ್ಗೆ ಭಾರತೀಯ ಸೇನೆ ಬಗ್ಗೆ ಹೇಳಿದ್ದೇನು

Operation Sindoor: ಭಾರತ ದುಃಖಿಸುವಂತೆ ಮಾಡುತ್ತೇವೆ, ಶತ್ರುಗಳನ್ನು ಸದೆಬಡಿಯುವುದು ನಮಗೆ ಗೊತ್ತು: ಪಾಕಿಸ್ತಾನ ಪ್ರಧಾನಿ

Mock Drill: ಮಾಕ್ ಡ್ರಿಲ್ ಸೈರನ್ ಬರುತ್ತಿದ್ದಂತೇ ಏನು ಮಾಡಬೇಕು, ಏನೆಲ್ಲಾ ಚಟುವಟಿಕೆ ಮಾಡಲಾಗುತ್ತದೆ ಇಲ್ಲಿದೆ ವಿವರ

Karnataka Weather: ಸತತ ಸೆಖೆ, ಬಿಸಿಲಿನಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments