Select Your Language

Notifications

webdunia
webdunia
webdunia
webdunia

ಪಾಕಿಸ್ತಾನಕ್ಕೆ ಎಫ್-16 ಜೆಟ್ ಮಾರಾಟ ಸಮರ್ಥಿಸಿಕೊಂಡ ಅಮೆರಿಕ

ಪಾಕಿಸ್ತಾನಕ್ಕೆ  ಎಫ್-16 ಜೆಟ್ ಮಾರಾಟ ಸಮರ್ಥಿಸಿಕೊಂಡ ಅಮೆರಿಕ
ವಾಷಿಂಗ್ಟನ್ : , ಶನಿವಾರ, 27 ಫೆಬ್ರವರಿ 2016 (17:04 IST)
ಭಾರತ ಮತ್ತು ಕೆಲವು ಅಮೆರಿಕದ ಸಂಸದರ ತೀವ್ರ ವಿರೋಧದ ನಡುವೆ ಒಬಾಮಾ ಆಡಳಿತ ಹಿಡಿದ ಪಟ್ಟನ್ನು ಬಿಡದೇ ಪಾಕಿಸ್ತಾನಕ್ಕೆ 8 ಎಫ್-16 ಯುದ್ಧವಿಮಾನಗಳನ್ನು ಮಾರಾಟ ಮಾಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.  8 ಎಫ್‌-16 ವಿಮಾನಗಳನ್ನು ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಮತ್ತು ಬಂಡುಕೋರ ನಿಗ್ರಹ ಕಾರ್ಯಾಚರಣೆಗೆ ನೆರವಾಗುವುದಕ್ಕೆ  ಮಾರಾಟ ಮಾಡುತ್ತಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ಹೆಲೆನಾ ಡಬ್ಲ್ಯು ವೈಟ್ ತಿಳಿಸಿದರು. 
 
ವಾಷಿಂಗ್ಟನ್‌ನಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿಯು ಉದ್ದೇಶಿತ ಮಾರಾಟವನ್ನು ಮುಂದುವರಿಸುವ ಒಬಾಮಾ ಆಡಳಿತದ ಸಂಕಲ್ಪವನ್ನು ಮೆಚ್ಚಿದೆ ಎಂದು ಪಾಕಿಸ್ತಾನದ ಸುದ್ದಿಪತ್ರಿಕೆ ಡಾನ್ ವರದಿ ಮಾಡಿದೆ.  
 
ಪಾಕಿಸ್ತಾನಕ್ಕೆ 699 ದಶಲಕ್ಷ ಡಾಲರ್ ಮೌಲ್ಯದ 8 ಹೆಚ್ಚುವರಿ ಎಫ್.-16 ಯುದ್ಧವಿಮಾನಗಳು, ರೆಡಾರ್‌ ಮತ್ತಿತರ ಉಪಕರಣಗಳ  ಮಾರಾಟಕ್ಕೆ ಅನುಮೋದನೆ ನೀಡಿದ್ದಾಗಿ ಅಮೆರಿಕ ಸರ್ಕಾರ ಫೆ. 12ರಂದು ಪ್ರಕಟಿಸಿತ್ತು.
 
ಭಾರತ ಮತ್ತು ಅಮೆರಿಕದ ಕೆಲವು ಸಂಸದರು ಈ ಮಾರಾಟಕ್ಕೆ ತೀವ್ರ ವಿರೋಧ ಸೂಚಿಸಿ, ಇಂತಹ ಕಾರ್ಯಾಚರಣೆಗೆ ಎಫ್-16 ವಿಮಾನಗಳು ಉಪಯುಕ್ತವಲ್ಲ, ಅಂತಿಮವಾಗಿ ಅದನ್ನು ಭಾರತದ ವಿರುದ್ಧ ಬಳಸುವ ಸಾಧ್ಯತೆ ಕುರಿತು  ಕಳವಳ ವ್ಯಕ್ತಪಡಿಸಿದ್ದರು. 
 
 ಪಾಕಿಸ್ತಾನಕ್ಕೆ ಎಫ್ -16 ಜೆಟ್‌ಗಳ ಪೂರೈಕೆಯು ಭಯೋತ್ಪಾದನೆ ನಿಗ್ರಹಕ್ಕೆ ನೆರವಾಗುತ್ತದೆ ಮತ್ತು ಅದೇ ಸಂದರ್ಭದಲ್ಲಿ  ವಾಷಿಂಗ್ಟನ್ ಜತೆ ಅದರ ಸಂಬಂಧವು ಒಂದೇ ವಿಷಯದಿಂದ ಕೂಡಿದ ಸಂಬಂಧವಲ್ಲ ಎಂದು ಅಮೆರಿಕದ ಸಮಜಾಯಿಷಿಯನ್ನು ಭಾರತ ಒಪ್ಪಿರಲಿಲ್ಲ. 
 

Share this Story:

Follow Webdunia kannada