Select Your Language

Notifications

webdunia
webdunia
webdunia
webdunia

ಜೈಲಿಂದ ತಪ್ಪಿಸಿಕೊಂಡು ಹಾರರ್ ಚಿತ್ರದಲ್ಲಿ ನಟಿಸಿದ್ದ ಸ್ಟೇಂಜ್ ಬಂಧನ

ಜೈಲಿಂದ ತಪ್ಪಿಸಿಕೊಂಡು ಹಾರರ್ ಚಿತ್ರದಲ್ಲಿ ನಟಿಸಿದ್ದ ಸ್ಟೇಂಜ್ ಬಂಧನ
ವಾಷಿಂಗ್ಟನ್ , ಬುಧವಾರ, 29 ಜುಲೈ 2015 (20:13 IST)
ತನ್ನ ಪ್ರೊಬೇಷನ್ ಅವಧಿಯನ್ನು ಉಲ್ಲಂಘಿಸಿ ಕಡಿಮೆ ಬಜೆಟ್ ಹಾರರ್ ಚಿತ್ರವೊಂದರಲ್ಲಿ ನಟಿಸಿದ್ದ ಬ್ಯಾಂಕ್ ದರೋಡೆಕೋರನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಜ್ಯಾಸನ್ ಸ್ಟೇಂಜ್   ಮಾರ್ಲಾ ಮಾಯಿ ಎಂಬ ಚಿತ್ರದಲ್ಲಿ ಮನೋವಿಕಲ್ಪ ಕೃತ್ಯವನ್ನು ಎಸಗುವ ವೈದ್ಯನ ಪಾತ್ರದಲ್ಲಿ   ನಟಿಸಿದ್ದ. ವಾಷಿಂಗ್ಟನ್ ಸ್ಟೇಟ್ ಪತ್ರಿಕೆಯಲ್ಲಿ ಚಿತ್ರದ ಶೂಟಿಂಗ್ ದೃಶ್ಯಗಳನ್ನು ಪ್ರಕಟಿಸಿದಾಗ ಅವನ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದರು. 
 
 ಪೊಲೀಸ್ ಏಜಂಟರು ಅವನನ್ನು ಗುರುತಿಸಿ ಚಿತ್ರದ ಸೆಟ್ ಹತ್ತಿರ ರೆಸ್ಟೊರೆಂಟ್‌ವೊಂದರಲ್ಲಿ ಬಂಧಿಸಿದರು. 2006ರಲ್ಲಿ ಸ್ಟೇಂಜ್ ಸಶಸ್ತ್ರ ಬ್ಯಾಂಕ್ ದರೋಡೆ ಎಸಗಿ 10 ವರ್ಷಗಳ ಜೈಲು ವಾಸಕ್ಕೆ ಗುರಿಯಾಗಿದ್ದ. ಆದರೆ ಕಳೆದ ವರ್ಷ ಅವನು ತಪ್ಪಿಸಿಕೊಂಡಿದ್ದರಿಂದ ಅವನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು.
 
ಚಿತ್ರದ ನಿರ್ಮಾಪಕರಾದ ಬ್ರಾಂಡನ್ ರಾಬರ್ಟ್ಸ್ ಸ್ಟೇಂಜ್ ಪ್ರತಿಭಾಶಾಲಿ ನಟನಾಗಿದ್ದು, ಚಿತ್ರತಂಡ ಮತ್ತು ಸಿಬ್ಬಂದಿ ಅವನ ನಟನೆಯನ್ನು ಮೆಚ್ಚಿದ್ದರು. ಸ್ಟೇಂಜ್‌ಗೆ ಹೊಂದಿಕೆಯಾಗುವಂತೆ ಚಿತ್ರವನ್ನು ಬರೆಯಲಾಗಿದ್ದು, ಸ್ಟೇಂಜ್ ಚಿತ್ರದಲ್ಲೇ ಉಳಿಯುತ್ತಾರೆ ಎಂದು ಹೇಳಿದ್ದಾರೆ. 

Share this Story:

Follow Webdunia kannada