ಮುಂಬೈ: ಅಮೆರಿಕಾದ ಕಾಲೇಜುಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಅಮೆರಿಕಾಕ್ಕೆ 2015-16 ರಲ್ಲಿ ಪ್ರತಿಶತ 25 ರಷ್ಟು ಆದಾಯ ಹರಿದುಬಂದಿದೆ. ಕೇವಲ ಭಾರತೀಯ ವಿದ್ಯಾರ್ಥಿಗಳಿಂದ 5 ಬಿಲಿಯನ್ದಷ್ಟು ಅಮೆರಿಕಾದ ಆರ್ಥಿಕತೆಗೆ ಸೇರ್ಪಡೆಯಾಗಿದೆ ಎಂದು ಅಮೆರಿಕಾ ವಾಣಿಜ್ಯ ಇಲಾಖೆ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ ಅಮೆರಿಕಾದಲ್ಲಿ ಚೀನಿ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿದ್ದು, ಪ್ರತಿಶತ 31.5 ರಷ್ಟಿದೆ. ಈ ಮೂಲಕ ಚೀನಾ ಪ್ರಥಮ ಸ್ಥಾನ, ಭಾರತ ಎರಡನೇ ಸ್ಥಾನ, ಸೌದಿ ಅರೆಬಿಯಾ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆ ಹೇಳುವುದಾದರೆ ಅಮೆರಿಕಾದಲ್ಲಿ ಪ್ರತಿಶತ 53 ರಷ್ಟು ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಇದರಿಂದ ಅಮೆರಿಕಾಕ್ಕೆ ವಾರ್ಷಿಕ 35 ಬಿಲಿಯನ್ದಷ್ಟು ಆದಾಯ ಕೇವಲ ಉನ್ನತ ಶಿಕ್ಷಣಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳಿಂದ ಎಂಬುದು ಆಶ್ಚರ್ಯ.
ಒಟ್ಟಿನಲ್ಲಿ ಉನ್ನತ ಶಿಕ್ಷಣದಿಂದ ಅಮೆರಿಕಾದ ಆರ್ಥಿಕ ಸ್ಥಿತಿ ಮತ್ತಷ್ಟು ಬೆಳೆಯುತ್ತಿದೆ. ಇದರಿಂದ ಕೇವಲ ಪ್ರಚಾರ ಅಷ್ಟೆ ಅಲ್ಲ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣವಾಗುತ್ತಿದೆ. ಈ ಸಾಲಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿರುವುದು ಮಹತ್ತರದ ಹೆಜ್ಜೆ.