Webdunia - Bharat's app for daily news and videos

Install App

ತಂದೆ ನಿರಂತರವಾಗಿ ರೇಪ್ ಮಾಡುತ್ತಿದ್ರೂ ಐ ಲವ್ ಯೂ ಪಾಪಾ ಎಂದ ಪುತ್ರಿ

Webdunia
ಮಂಗಳವಾರ, 5 ಮೇ 2015 (17:34 IST)
ಹಲವಾರು ವರ್ಷಗಳಿಂದ ತಂದೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದರೂ ಇವತ್ತಿಗೂ ತಂದೆಯನ್ನು ತುಂಬಾ ಪ್ರೀತಿಸುತ್ತಿರುವುದಾಗಿ ಪುತ್ರಿಯೊಬ್ಬಳು ಹೇಳಿಕೆ ನೀಡಿ ಅಚ್ಚರಿ ಮತ್ತು ಆಘಾತ ಮೂಡಿಸಿದ್ದಾಳೆ.

ಆರೋಪಿ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪರಿಣಾಮವಾಗಿ ಆಕೆ ಗರ್ಭಿಣಿಯಾದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪುತ್ರಿ 10 ವರ್ಷದವಳಾಗಿದ್ದಾಲೇ ಆಕೆಯ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದ್ದ ಪಾಪಿ ತಂದೆ, ಇದೀಗ 15 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ನ್ಯಾಯಮೂರ್ತಿಗಳು, ಆರೋಪಿ ತಂದೆಗೆ 15 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸುತ್ತಿರುವ ಸಂದರ್ಭದಲ್ಲಿ ಓಡೋಡಿ ಬಂದ ಪುತ್ರಿ ಐ ಲವ್ ಯೂ ಪಾಪಾ, ಐ ಮಿಸ್ ಯೂ ಎಂದು ಗೋಳಾಡಿರುವುದನ್ನು ಕಂಡ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದವರಿಗೆ ದಿಗ್ಬ್ರಮೆ ಮೂಡಿಸಿತು.

ಆರೋಪಿ ತಂದೆ, ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ನಂತರ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದ. ಭರವಸೆಯನ್ನು ಹುಸಿಗೊಳಿಸಿ ಮತ್ತೆ ಮತ್ತೆ ಅತ್ಯಾಚಾರವೆಸಗುತ್ತಿದ್ದ. ಪುತ್ರಿ ಗರ್ಭಿಣಿಯಾಗುವವರೆಗೂ ಅತ್ಯಾಚಾರ ಮುಂದುವರಿಸಿದ್ದ. ತಂದೆಯ ಕೃತ್ಯವನ್ನು ಬಹಿರಂಗಪಡಿಸಿದಲ್ಲಿ ಆತನ ಮತ್ತು ತನ್ನ ಪ್ರೀತಿಗೆ ಅಡ್ಡಿಯಾಗಬಹುದು ಎನ್ನುವ ಆತಂಕದಿಂದ ಪುತ್ರಿ ತಂದೆಯ ಕೃತ್ಯವನ್ನು ಮುಚ್ಚಿಟ್ಟಿದ್ದಳು.

ಆದರೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಕೋರ್ಟ್ ಆತನಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ತಂದೆ ಶಿಕ್ಷೆ ಕೊಡಬೇಡಿ ಎನ್ನುವ ಪುತ್ರಿಯ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments