Webdunia - Bharat's app for daily news and videos

Install App

ತುರ್ಕಿಸ್ತಾನ ಸೇನಾ ದಂಗೆ: 60 ಕ್ಕೂ ಹೆಚ್ಚು ಮಂದಿ ಸಾವು, 150 ಜನರಿಗೆ ಗಂಭೀರ ಗಾಯ

Webdunia
ಶನಿವಾರ, 16 ಜುಲೈ 2016 (12:54 IST)
ತುರ್ಕಿಸ್ತಾನದಲ್ಲಿ ನಡೆದ ಸೇನಾ ದಂಗೆಯಲ್ಲಿ 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
 
ನಿನ್ನೆ ರಾತ್ರಿ ಸೇನಾ ದಂಗೆ ಆರಂಭಿಸಿದ ಸೇನಾಪಡೆಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.
 
ತುರ್ಕಿಸ್ತಾನದ ಅಧ್ಯಕ್ಷ  ರಿಸೆಪ್ ಟಯ್ಯಿಪ್ ಎರ್ಡೋಗನ್ ಮಾತನಾಡಿ, ಸೇನೆಯ ಸಣ್ಣ ತುಕಡಿಯೊಂದು ದಂಗೆ ಏಳುವ ವಿಫಲ ಪ್ರಯತ್ನ ನಡೆಸಿದೆ. ಸೇನಾ ದಂಗೆಯನ್ನು ವಿಫಲಗೊಳಿಸಲು ಜನತೆ ಸಜ್ಜಾಗುವಂತೆ ಕರೆ ನೀಡಿದರು. ದೇಶದ ಜಾತ್ಯೀತತೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜನತೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ. 
 
ಅಂಕಾರಾದಲ್ಲಿರುವ ಸಂಸತ್ ಭವನದ ಮೇಲೆ ಬಾಂಬ್ ದಾಳಿ ನಡೆಸಿದ ಸೈನಿಕರು ಹಲವರ ಹತ್ಯೆಗೆ ಕಾರಣವಾಗಿದ್ದಾರೆ. ದಂಗೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಗುಡುಗಿದರು. ಇಲ್ಲಿಯವರೆಗೆ ದಂಗೆಯೆದಿದ್ದ ಸುಮಾರು 345 ಸೈನಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಇಸ್ತಾನ್‌‌ಬುಲ್ ಅಟಾಟುರ್ಕ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎರ್ಡೋಗನ್, ದಂಗೆಯೆದ್ದ ಸೈನಿಕರನ್ನು ಸರಕಾರ ಈಗಾಗಲೇ ವಶಕ್ಕೆ ತೆಗೆದುಕೊಂಡಿದೆ ಒಂದೆರಡು ದಿನಗಳಲ್ಲಿ ಸ್ಥಿತಿ ಸಾಮಾನ್ಯವಾಗಲಿದೆ. ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments