Select Your Language

Notifications

webdunia
webdunia
webdunia
webdunia

ಮಹಾತ್ಮ ಗಾಂಧಿ ಉಲ್ಲೇಖಿಸಿರದ ಸಾಲನ್ನು ಪೋಸ್ಟ್ ಮಾಡಿದ ಟ್ರಂಪ್

ಮಹಾತ್ಮ ಗಾಂಧಿ ಉಲ್ಲೇಖಿಸಿರದ ಸಾಲನ್ನು ಪೋಸ್ಟ್ ಮಾಡಿದ ಟ್ರಂಪ್
ವಾಷಿಂಗ್ಟನ್ , ಮಂಗಳವಾರ, 1 ಮಾರ್ಚ್ 2016 (13:38 IST)
ರಿಪಬ್ಲಿಕನ್ ಅಧ್ಯಕ್ಷೀಯ ಆಕಾಂಕ್ಷಿ ಡೋನಾಲ್ಡ್ ಟ್ರಂಪ್ ಇನ್‌ಸ್ಟಾಗ್ರಾಂನಲ್ಲಿ ಮಹಾತ್ಮ ಗಾಂಧೀಜಿ ಉಲ್ಲೇಖವೆಂದು ಹೇಳಿ ಪೋಸ್ಟ್ ಮಾಡಿರುವುದನ್ನು ಅಮೆರಿಕ ಮಾಧ್ಯಮ ಟೀಕಿಸಿದೆ. ಭಾರತದ ಮುಖಂಡ ಗಾಂಧೀಜಿ ಈ ಪದಗಳನ್ನು ಬಳಸಿರುವುದಕ್ಕೆ ಸಾಕ್ಷ್ಯವೇ ಇಲ್ಲ ಎಂದು ಹೇಳಿದೆ.
 
 "ಮೊದಲಿಗೆ ಅವರು ಕಡೆಗಣಿಸುತ್ತಾರೆ. ನಂತರ ಅವರು ನಿಮ್ಮ ಕಡೆ ನೋಡಿ ನಗುತ್ತಾರೆ. ನಂತರ ಅವರು ಹೋರಾಟ ಮಾಡುತ್ತಾರೆ, ಬಳಿಕ ನೀವು ಗೆಲ್ಲುತ್ತೀರಿ-ಮಹಾತ್ಮ ಗಾಂಧಿ'' ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. 
 
ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅಲಬಾಬಾಮಾದ ಟ್ರಂಪ್ ಪ್ರಚಾರ ಕೇಂದ್ರದಲ್ಲಿ ಬೆಂಬಲಿಗರು ಫಲಕಗಳನ್ನು ಹಿಡಿದ ಚಿತ್ರವನ್ನೂ ಸೇರಿಸಲಾಗಿತ್ತು. ಆದರೆ ಈ ಪೋಸ್ಟ್ ಮಾಡಿದ ಕೆಲವೇ ಗಳಿಗೆಯಲ್ಲಿ  ಟ್ರಂಪ್ ವಿರೋಧಿ ಲಾಬಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದೆ.  ಗಾಂಧಿ ಈ ಸಾಲನ್ನು ಉಲ್ಲೇಖಿಸಿದ ದಾಖಲೆಯೇ ಇಲ್ಲ ಎಂದು ಉನ್ನತ ಅಮೆರಿಕ ರಾಜಕೀಯ ವೆಬ್‌ಸೈಟ್ ಹಿಲ್ ತಿಳಿಸಿದೆ. 
 
ಈ ಉಲ್ಲೇಖವನ್ನು 1918ರ ಕಾರ್ಮಿಕ ಸಂಘಟನೆ ಭಾಷಣದಲ್ಲಿ ಸಮಾಜವಾದಿ ನಾಯಕ ನಿಕೋಲಾಸ್ ಕ್ಲೈನ್ ಬಳಸಿದ ಪದಗಳಿಗೆ ಹೋಲಿಕೆಯಾಗುತ್ತದೆ ಎಂದು ಹಿಲ್ ತಿಳಿಸಿದೆ. 
 
 

 


Share this Story:

Follow Webdunia kannada