ನೂತನವಾಗಿ ಆಯ್ಕೆಯಾದ ಅಮೆರಿಕದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್,ಪತ್ರಕರ್ತರು ಅಪ್ರಾಮಾಣಿಕರು ಮತ್ತು ಮಹಾನ್ ಸುಳ್ಳುಗಾರರು ಎಂದು ವಾಗ್ದಾಳಿ ನಡೆಸಿ ಅಪಮಾನಿಸಿರುವುದು ಬಹಿರಂಗವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದ ಟ್ರಂಪ್, ದೇಶದ ಪತ್ರಕರ್ತರೊಂದಿಗೆ ಉತ್ತಮ ಸಂಬಂಧ ಹೊಂದುವ ಬದಲು ಅಪಮಾನಿಸಿರುವುದು ಹೇಯ ಸಂಗತಿ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಟ್ರಂಪ್, ಚುನಾವಣೆ ಸಂದರ್ಭದಲ್ಲಿ ನೀವು ಪ್ರಾಮಾಣಿಕತೆಯಿಂದ, ನಿಖರವಾಗಿ ವರದಿ ಮಾಡಲಿಲ್ಲ. ನನ್ನ ಕರೆಯನ್ನು ಅಮೆರಿಕದ ನಾಗರಿಕರಿಗೆ ತಲುಪಿಸುವಲ್ಲಿ ವಿಫಲವಾಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಮಾಧ್ಯಮಗಳೊಂದಿಗೆ ನಡೆದ ಕಾರ್ಯಕ್ರಮ ಕುರಿತಂತೆ ಪ್ರಸಾರ ಮಾಡುವಲ್ಲಿ ಅಪ್ರಾಮಾಣಿಕತೆ ಮತ್ತು ಪಕ್ಷಪಾತ ಧೋರಣೆ ತಳೆದಿದ್ದೀರಿ ಎಂದು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ