Select Your Language

Notifications

webdunia
webdunia
webdunia
webdunia

ತೈವಾನ್‌ನಲ್ಲಿ ಪ್ರಬಲ ಭೂಕಂಪ: 3 ಸಾವು

ತೈವಾನ್‌ನಲ್ಲಿ ಪ್ರಬಲ ಭೂಕಂಪ: 3 ಸಾವು
ತೈಪೆ , ಶನಿವಾರ, 6 ಫೆಬ್ರವರಿ 2016 (08:54 IST)
ದಕ್ಷಿಣ ಜಪಾನ್‌ನ ಥೈವಾನ್ ನಗರದಲ್ಲಿ ಇಂದು ನಸುಕಿನ ಜಾವ 4.33ರ ಸುಮಾರಿಗೆ ಪ್ರಬಲ ಭೂ ಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂ ಕಂಪದ ತೀವ್ರತೆ 6.4 ಪ್ರಮಾಣ ದಾಖಲಾಗಿದ್ದು ಪ್ರಾಥಮಿಕ ಮಾಹಿತಿಯ ಪ್ರಕಾರ 3 ಜನರು ಮೃತಪಟ್ಟಿದ್ದಾರೆ ಎಂದು ಥೈವಾನೀ ವಿಪತ್ತು ನಿರ್ವಹಣಾ ಸೆಂಟರ್ ಅಧಿಕಾರಿಗಳು ತಿಳಿಸಿದ್ದಾರೆ. 

ಘಟನೆಯಲ್ಲಿ 150 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡಗಳಡಿ ಸಿಲುಕ್ಕಿದವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆಯುತ್ತಿದ್ದು ಇಲ್ಲಿಯವರೆಗೆ 221 ಜನರನ್ನು ರಕ್ಷಿಸಲಾಗಿದೆ.
 
ಹಲವು ಕಟ್ಟಡಗಳು ಧರೆಗುರುಳಿದ್ದು, 17 ಅಂತಸ್ತಿನ ಕಟ್ಟಡವೊಂದು ಧ್ವಂಸಗೊಂಡಿದೆ. ಇದರ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಸೈನಿಕರು, ವಿಪತ್ತು ನಿರ್ವಹಣಾ ಪಡೆ ಸೇರಿದಂತೆ 1,500 ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
 
ಅತ್ಯಂತ ಪುರಾತನ ನಗರವಾದ ತೈವಾನ್‌ ನಗರದಲ್ಲಿ 1.9 ಮಿಲಿಯನ್ ಜನರು ವಾಸವಾಗಿದ್ದಾರೆ.

Share this Story:

Follow Webdunia kannada