ಈ ಸ್ಕಾರ್ಫ್ ತೊಟ್ಟರೆ ನೀವು ಅದೃಶ್ಯ

Webdunia
ಸೋಮವಾರ, 27 ಫೆಬ್ರವರಿ 2017 (12:40 IST)
ಮನುಷ್ಯ, ಭೂತ, ದೇವತೆಗಳು ಅದೃಶ್ಯ ರೂಪದಲ್ಲಿ ಬರುವುದನ್ನು ಕಥೆಗಳಲ್ಲಿ ಓದಿರುತ್ತೇವೆ. ಸಿನಿಮಾಗಳಲ್ಲಿ ನೋಡಿರುತ್ತೇವೆ. ನಮಗೂ ಅದೃಶ್ಯವಾಗುವ ವಿಶೇಷ ಶಕ್ತಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನಿಮಗೆ ಒಮ್ಮೆಯೂ ಅನ್ನಿಸಿಲ್ಲವೇ? ಬಿಡಿ ಇವೆಲ್ಲ ಸಾಧ್ಯವಾಗುವ ಮಾತಲ್ಲ ಎನ್ನುತ್ತೀರಾ. ಇಲ್ಲ ಈಗ ಅದು ಸಾಧ್ಯ. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.

ಮಾರುಕಟ್ಟೆಗೆ ಒಂದು ಸ್ಕಾರ್ಫ್ ಬಂದಿದೆ. ಅದನ್ನ ತೊಟ್ಟುಕೊಂಡಾಗ ಯಾರಾದರೂ ನಿಮ್ಮ ಫೋಟೋವನ್ನು ಕ್ಲಿಕ್ಕಿಸಿದರೆ , ಅದು ವ್ಯರ್ಥ. ಫೋಟೋದಲ್ಲಿ ನಿಮ್ಮ ಮುಖ ಕಾಣಿಸುವುದಿಲ್ಲ.
 
ಸೆಲೆಬ್ರಿಟಿಗಳ ಖಾಸಗಿತನವನ್ನು ಗಮನದಲ್ಲಿಟ್ಟುಕೊಂಡು ಹಾಲೆಂಡ್‌ನ ಫ್ಯಾಷನ್ ಡಿಸೈನರ್ ಸೈಫ್ ಸಿದ್ಧಿಕಿ ಈ ವಿನೂತನ ಸ್ಕಾರ್ಫ್‌ನ್ನು ಕಂಡು ಹಿಡಿದಿದ್ದಾರೆ. ಮತ್ತೀಗ ಇದನ್ನು ಧರಿಸಿಕೊಂಡು ಓಡಾಡುವ ಪ್ರತಿಷ್ಠಿತರು ಫೋಟೋಗ್ರಾಫರ್‌ಗಳ ಕಣ್ಣಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳುವುದಂತೂ ಖಚಿತ .
 
ಈ ವಿಶೇಷ ಬಟ್ಟೆ ತುಂಡನ್ನು ಆ್ಯಂಟಿ ಫ್ಲಾಷ್ ಸ್ಕಾರ್ಫ್ ಎಂದು ಕರೆಯುತ್ತಾರೆ. ಜನರ ಖಾಸಗಿತನವನ್ನು ರಕ್ಷಿಸಲು ಇದನ್ನು ತಯಾರಿಸಿದ್ದೇವೆ ಎನ್ನುತ್ತಾರೆ ಸಿದ್ಧಿಕಿ.
 
ಮುಖವನ್ನು ಮರೆಮಾಚುವ ಈ ಸ್ಕಾರ್ಫ್ ಈಗ ಸೆಲೆಬ್ರಿಟಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನು ಖರೀದಿಸಲು ಸಿನಿಮಾ ತಾರೆಯರು ಮುಗಿಬೀಳುತ್ತಿದ್ದಾರೆ. ಹಾಲಿವುಡ್‌ನ ಅನೇಕರು, ವಿಶ್ವ ಪ್ರಸಿದ್ಧ ಆಟಗಾರರು ಸಹ  ಈಗಾಗಲೇ ಅದನ್ನು ಬಳಸುತ್ತಿದ್ದಾರೆ. ಕೆಮರೂನ್ ಡಿಯಾಸ್ , ಜೆರೋಮ್ ಬಾಓಟೆಂಗ್‌ನಂತಹ ಫೂಟ್ಬಾಲ್ ಆಟಗಾರರು ಸಹ ಇದರಲ್ಲಿ ಸೇರಿದ್ದಾರೆ, 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments