Select Your Language

Notifications

webdunia
webdunia
webdunia
webdunia

ವಿಶ್ವ ಸುಂದರಿಯಾಗ ಬಂದವಳು ಜೈಲು ಪಾಲಾದಳು

ವಿಶ್ವ ಸುಂದರಿಯಾಗ ಬಂದವಳು ಜೈಲು ಪಾಲಾದಳು
ಬೀಜಿಂಗ್ , ಗುರುವಾರ, 28 ಜುಲೈ 2016 (13:44 IST)
ವಿಶ್ವ ಸುಂದರಿ ಸ್ಫರ್ಧೆಯಲ್ಲಿ ಭಾಗವಹಿಸಲು ಚೀನಾಗೆ ಹೋಗಿದ್ದ ಕೊಲಂಬಿಯಾದ ರೂಪದರ್ಶಿಯೋರ್ವಳು ಜೈಲು ಪಾಲಾಗಿದ್ದು, 15 ವರ್ಷದ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾಳೆ.


22 ವರ್ಷದ ಜೂಲಿಯಾನ ಲೋಪೆಜ್‌ ಸರಝೋಲಾ ಚೀನಾದಲ್ಲಿ ನಡೆಯಲಿದ್ದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಳು. ಡ್ರಗ್ಸ್‌ ಸಾಗಿಸಿದ ಅರೋಪಕ್ಕೆ ಒಳಗಾದ ಆಕೆಯ ಅಪರಾಧ ಸಾಬೀತಾಗಿದ್ದು  ಚೀನಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಕೊಲಂಬಿಯಾದ ಅಂಟಿಯೋಕೂಯ ಸೌಂದರ್ಯ ಸ್ಪರ್ಧೆಯ  ವಿಜೇತೆಯಾಗಿದ್ದ ಸರಝೋವಾ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸಿನೊಂದಿಗೆ ಕಳೆದ ವರ್ಷ ಜುಲೈ 18 ರಂದು ಚೀನಾಕ್ಕೆ ಬಂದಿದ್ದಳು. ಲ್ಯಾಪ್‌ಟಾಪ್‌ನಲ್ಲಿ 610 ಗ್ರಾಂ ಕೊಕೇನ್‌ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆಕೆ ಗುವಾಂಗ್ಝೌ ಬೈಯೂನ್‌  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ನನಗೆ ಇಲ್ಲಿನ ಖರ್ಚುವೆಚ್ಚ ತೂಗಿಸಲು ಹಣ ಬೇಕಾಗಿತ್ತು. ಹೀಗಾಗಿ ತಪ್ಪು ಮಾಡಿದೆ ಎಂದಾಕೆ ನ್ಯಾಯಾಧೀಶರ ಮುಂದೆ ಒಪ್ಪಿಕೊಂಡಿದ್ದಾಳೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜಕೀಯ: ಗಿರೀಶ್ ಮಟ್ಟೆಣ್ಣನವರ್