Select Your Language

Notifications

webdunia
webdunia
webdunia
webdunia

ಭಾರತ, ಪಾಕ್ ಪ್ರಧಾನಿಗಳು ಒಂದೇ ವೇದಿಕೆ ಹಂಚಿಕೊಂಡರೂ ಕೈಕುಲಕಲಿಲ್ಲ, ಮುಗುಳ್ನಗಲಿಲ್ಲ

ಭಾರತ, ಪಾಕ್ ಪ್ರಧಾನಿಗಳು ಒಂದೇ ವೇದಿಕೆ ಹಂಚಿಕೊಂಡರೂ ಕೈಕುಲಕಲಿಲ್ಲ, ಮುಗುಳ್ನಗಲಿಲ್ಲ
ಕಠ್ಮಂಡು , ಬುಧವಾರ, 26 ನವೆಂಬರ್ 2014 (18:50 IST)
ಅವರು ಒಂದೇ ವೇದಿಕೆ ಹಂಚಿಕೊಂಡರು. ಆದರೆ ಕೈಕುಲುಕುವುದಿರಲಿ, ಸೌಜನ್ಯಕ್ಕೆ ಪರಸ್ಪರ ಮುಖವನ್ನು ನೋಡಿ ನಗು ಹೊರಹಾಕಲಿಲ್ಲ.  ಮೂರು ಗಂಟೆಗಳ ಸಾರ್ಕ್ ಶೃಂಗಸಭೆಯಲ್ಲಿ ಬುಧವಾರ ಪಾಕಿಸ್ತಾನ ಮತ್ತು ಭಾರತದ ಪ್ರಧಾನಿಗಳ ನಡುವೆ ಕಂಡುಬಂದ ದೃಶ್ಯ.

ಎರಡು ಸೀಟುಗಳ ಅಂತರದಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಪರಸ್ಪರ ಮುಖ ನೋಡಲಿಲ್ಲ. ಷರೀಫ್ ಭಾಷಣಕ್ಕೆ ಮುಂಚೆ ಮತ್ತು ನಂತರ ಮೋದಿ ಕುಳಿತಿದ್ದ ಆಸನವನ್ನು ಹಾದುಹೋದರೂ ಅವರತ್ತ ತಿರುಗಿಯೂ ನೋಡಲಿಲ್ಲ.

ಮೋದಿ ಮತ್ತು ಷರೀಫ್ ನಡುವೆ ಮಾಲ್ಡೀವ್ಸ್ ಮತ್ತು ನೇಪಾಳ್ ಮುಖಂಡರು ಕುಳಿತಿದ್ದರು. ಉಭಯ ನಾಯಕರ ನಡುವೆ ರಚನಾತ್ಮಕ ಮಾತುಕತೆ ನಿಗದಿಯಾಗದಿದ್ದರೂ ಸಂಕ್ಷಿಪ್ತ ಮುಗುಳ್ನಗೆ ವಿನಿಮಯವನ್ನು ನಿರೀಕ್ಷಿಸಲಾಗಿತ್ತು. ಮಾತುಕತೆ ಆರಂಭಕ್ಕೆ ಭಾರತದ ಕೋರ್ಟ್‌ನಲ್ಲಿ ಚೆಂಡಿದೆ ಎಂದು ಷರೀಫ್ ಹೇಳಿದರು. ಆದರೆ ನಾವು ಅರ್ಥಪೂರ್ಣ ಮಾತುಕತೆಗೆ ಸಿದ್ಧ ಎಂದು ಭಾರತ ಹೇಳುತ್ತಿದೆ. 

Share this Story:

Follow Webdunia kannada