Webdunia - Bharat's app for daily news and videos

Install App

ಪತ್ನಿಯನ್ನು ಗ್ರಾಹಕರಿಗೆ ಕಳುಹಿಸಿ ಹಣ ಸಂಪಾದಿಸುತ್ತಿದ್ದ ಆರೋಪಿ ಅರೆಸ್ಟ್

Webdunia
ಸೋಮವಾರ, 13 ನವೆಂಬರ್ 2023 (11:08 IST)
ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದ ಮೇಲೆ ಪೊಲೀಸರು ಉತ್ತರ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಆರೋಪಿ, ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪವನ್ನು ಒಪ್ಪಿಕೊಂಡು ನಾಲ್ಕು ವರ್ಷಗಳಲ್ಲಿ ಪತ್ನಿಯನ್ನು ಹಲವಾರು ಜನರ ಬಳಿ ಲೈಂಗಿಕ ಕ್ರಿಯೇಗಾಗಿ ಕಳುಹಿಸಿದ್ದೇನೆ. ಪ್ರತಿ ತಿಂಗಳು 5000 ಪೌಂಡ್ ಹಣವನ್ನು ಸಂಪಾದಿಸುತ್ತಿದ್ದೆ ಎಂದು ಆರೋಪಿ ಪತಿ ಹೇಳಿದ್ದಾನೆ.  
 
 
ಹಣ ಸಂಪಾದಿಸುವ ಮಹದಾಸೆ ಹೊಂದಿದ್ದ ಪತಿ ಮಹಾಶಯನೊಬ್ಬ, ತನ್ನ ಪತ್ನಿಯನ್ನು ವೇಶ್ಯಾವಾಟಿಕೆಗೆ ಇಳಿಯುವಂತೆ ಒತ್ತಡ ಹೇರಿದ ಪ್ರಕರಣ ಬಯಲಿಗೆ ಬಂದಿದೆ. ಆರೋಪಿ ಪತಿ ನಾಲ್ಕು ವರ್ಷಗಳಲ್ಲಿ ತನ್ನ ಪತ್ನಿಯನ್ನು 2742 ಜನರ ಬಳಿ ಸೆಕ್ಸ್ ದಾಹ ತೀರಿಸಲು ಕಳುಹಿಸಿದ್ದಾನೆ.
 
ಆರೋಪಿ ವ್ಯಕ್ತಿ ತನ್ನ ಪತ್ನಿ ಮತ್ತು ಐದು ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದ. ಫ್ರಾನ್ಸ್ ದೇಶದಲ್ಲಿ ವೇಶ್ಯಾವಾಟಿಕೆಗೆ ಕಾನೂನಿನ ಮಾನ್ಯತೆಯಿದೆ. ಆದರೆ, ವೇಶ್ಯಾವಾಟಿಕೆಗೆ ಪ್ರಚೋದಿಸುವುದಾಗಲಿ ಅಥವಾ ಒತ್ತಡ ಹೇರುವುದಾಗಲಿ ಕಾನೂನುಬಾಹಿರವಾಗಿದೆ.
 
46 ವರ್ಷ ವಯಸ್ಸಿನ ಪತ್ನಿ ಮನೆಯೊಳಗಡೆ ಗ್ರಾಹಕನ ಸೆಕ್ಸ್ ದಾಹ ತೀರಿಸುತ್ತಿದ್ದರೆ, ಆರೋಪಿ ವ್ಯಕ್ತಿ ತನ್ನ ಐದು ವರ್ಷದ ಪುತ್ರಿಯೊಂದಿಗೆ ಮನೆಯ ಹೊರಗಡೆ ಕಾರಿನಲ್ಲಿ ಕುಳಿತಿರುತ್ತಿದ್ದ. ಇಂಟರ್‌ನೆಟ್‌ನಲ್ಲಿ ತನ್ನ ಪತ್ನಿಯ ಪ್ರೋಫೈಲ್ ಪೋಸ್ಟ್ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತಿದ್ದ ಎನ್ನಲಾಗಿದೆ.
 
ಕಳೆದ ವಾರವೇ ಪೊಲೀಸರು ಪತಿ ಮತ್ತು ಪತ್ನಿಯನ್ನು ಬಂಧಿಸಿ ಪತಿಯ ವಿರುದ್ಧ ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣವನ್ನು ದಾಖಲಿಸಿದ್ದರು. ಇದೀಗ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಅದೇ ಕೃತ್ಯವನ್ನು ಮುಂದುವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆಯಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ರಜೆ ಮಂಜೂರು ಮಾಡದಂತೆ ಸಾರಿಗೆ ಇಲಾಖೆ ಸೂಚನೆ

ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಛೀಮಾರಿ: ನಿಜವಾದ ಭಾರತೀಯ ಈ ರೀತಿ ಹೇಳಲು ಸಾಧ್ಯವಿಲ್ಲ

ಬಿಹಾರದಲ್ಲಿ ಗೆಲ್ಲಲು ಸಾಧ್ಯವಿಲ್ಲ, ಅದಕ್ಕೇ ರಾಹುಲ್ ಗಾಂಧಿ ನಾಟಕ: ಬಿವೈ ವಿಜಯೇಂದ್ರ

ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ ಸಂಬಳವೇ ಆಗಿಲ್ಲ: ಇನ್ನೂ ಕುರ್ಚಿಯಲ್ಲಿರಬೇಕಾ ಆರ್ ಅಶೋಕ್ ಟಾಂಗ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ