ಟೆಕ್ಸಾಸ್‌ನ ಅಪ್ರಾಪ್ತ ವಯಸ್ಕ ತಂದೆಯೊಬ್ಬ ತನ್ನ ಮಲಮಗ ಹಾಸಿಗೆ ಮೇಲೆ ಕುಣಿಯುವುದನ್ನು ನಿಲ್ಲಿಸದಿದ್ದಾಗ ಅವನಿಗೆ ಗುಂಡಿಕ್ಕಿ ಕೊಂದು ಹಾಕಿದ ಅಮಾನವೀಯ ಘಟನೆ ಸಂಭವಿಸಿದೆ. 18 ವರ್ಷದ ಜಾರ್ಜ್ ಕೋಟಿ ವೇಮನ್‌ನನ್ನು ಹತ್ಯೆ ಆರೋಪದ ಮೇಲೆ ಬಂಧಿಸಲಾಗಿದೆ.
ಓಕ್ಲಾಹೋಮಾ ಗಡಿಯ ಬೆಲೆವು ಸಣ್ಣ ಪಟ್ಟಣದ ನಿವಾಸವೊಂದರಲ್ಲಿ ಈ ಘಟನೆ ನಡೆದಿದೆ. ವೇಮನ್ ತನ್ನ ಮೂರು ವರ್ಷ ವಯಸ್ಸಿನ ಮಲಮಗ ಡಾಮಿನಿಕ್ ಹಾಸಿಗೆ ಮೇಲೆ ಜಿಗಿಯುತ್ತಿದ್ದಾಗ ಅವನ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ. 911 ಕರೆ ಬಳಿಕ, ಹೆಲಿಕಾಪ್ಟರ್ ಆಂಬ್ಯುಲೆನ್ಸ್ ಡಾಮಿನಿಕ್‌ನನ್ನು 40 ಮೈಲು ದೂರದ ಆಸ್ಪತ್ರೆಗೆ ಸೇರಿಸಿದರೂ ಅಷ್ಟರಲ್ಲಿ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.
ಆರಂಭದಲ್ಲಿ ಪ್ರತ್ಯಕ್ಷದರ್ಶಿಗಳು ಡಾಮಿನಿಕ್ ಆಕಸ್ಮಿಕವಾಗಿ ಗನ್ ಮೇಲೆ ಕಾಲಿರಿಸಿದಾಗ ಅದರಿಂದ ಗುಂಡು ಹಾರಿತು ಎಂದು ತನಿಖೆದಾರರಿಗೆ ತಿಳಿಸಿದ್ದರು.
ಆದರೆ ಮತ್ತಷ್ಟು ತನಿಖೆ ನಡೆಸಿದಾಗ ವೇಮನ್ ಬಾಲಕನ ಕಡೆ ಪಿಸ್ತೂಲು ತೋರಿಸಿ ಹಾಸಿಗೆ ಮೇಲೆ ಜಿಗಿಯುವುದನ್ನು ನಿಲ್ಲಿಸುವಂತೆ ನಿಲ್ಲಿಸದಿದ್ದರೆ ಶೂಟ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.