Select Your Language

Notifications

webdunia
webdunia
webdunia
webdunia

ಸೆಲ್ಫೀ ತೆಗೆಯುವಾಗ ಆಕಸ್ಮಿಕವಾಗಿ ಹಾರಿದ ಗುಂಡು: ಅಪ್ರಾಪ್ತ ವಯಸ್ಕ ಸಾವು

ಸೆಲ್ಫೀ ತೆಗೆಯುವಾಗ ಆಕಸ್ಮಿಕವಾಗಿ ಹಾರಿದ ಗುಂಡು: ಅಪ್ರಾಪ್ತ ವಯಸ್ಕ ಸಾವು
ವಾಷಿಂಗ್ಟನ್ , ಬುಧವಾರ, 2 ಸೆಪ್ಟಂಬರ್ 2015 (17:37 IST)
ಲೋಡ್ ಮಾಡಿದ ಪಿಸ್ತೂಲಿನೊಂದಿಗೆ ಸೆಲ್ಫೀ ತೆಗೆಯಲು ಪ್ರಯತ್ನಿಸಿದ 19 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಪಿಸ್ತೂಲಿನ ಟ್ರಿಗರ್ ಒತ್ತಿ ಗುಂಡು ಗಂಟಲಿಗೆ ತಾಗಿದ್ದರಿಂದ ಮೃತಪಟ್ಟಿದ್ದಾನೆ. ಡೆಲಿಯಾನ್ ಅಲೋನ್ಸೊ ಸ್ಮಿತ್ ವಾಯವ್ಯ ಹೌಸ್ಟನ್‌ನಲ್ಲಿ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದರಿಂದ ಗುಂಡು ನೇರವಾಗಿ ಅವನ ಗಂಟಲಿಗೆ ಬಡಿಯಿತು.
ಈ ಘಟನೆ ನಿನ್ನೆ ನಡೆದಾಗ ಸ್ಮಿತ್ ಸಹೋದರ ಸಂಬಂಧಿ ಇನ್ನೊಂದು ಕೋಣೆಯಲ್ಲಿದ್ದರು. ಈ ಪಿಸ್ತೂಲು ಹೇಗೆ ಅವರ ಕೈಯಲ್ಲಿ ಬಂತೆಂದು ತಮಗೆ ಗೊತ್ತಿಲ್ಲವೆಂದು ಸ್ಮಿತ್ ಸಹೋದರ ಸಂಬಂಧಿ ತಿಳಿಸಿದ್ದಾರೆ.
 
 ಸ್ಮಿತ್ ಅಜ್ಜಿ ಆಲ್ಮಾ ಡೌಗ್ಲಾಸ್ ಸ್ಥಳೀಯ ರೇಡಿಯೊ ಕೇಂದ್ರಕ್ಕೆ ಈ ಘಟನೆ ಬಗ್ಗೆ ತಿಳಿಸುತ್ತಾ,  ನಿನ್ನೆ ನನ್ನ ಹುಟ್ಟುಹಬ್ಬವಿದ್ದು, ನನಗೆ ಹ್ಯಾಪಿ ಬರ್ತ್‌ಡೇ ಹೇಳಲು ಇಲ್ಲಿಗೆ ಬಂದಿದ್ದ. ಆದರೆ ಈಗ ಇಂತಹ ಆಘಾತಕಾರಿ ಘಟನೆ ನಡೆದಿದೆ ಎಂದು ಹೇಳಿದ್ದಾರೆ. 
 
 ಈ ವರ್ಷಾರಂಭದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ 21 ವರ್ಷ ವಯಸ್ಸಿನ ರಷ್ಯಾದ ಮಹಿಳೆ ಪಿಸ್ತೂಲಿನೊಂದಿಗೆ ಸೆಲ್ಫೀ ಚಿತ್ರ ತೆಗೆಯುವಾಗ ಆಕಸ್ಮಿಕವಾಗಿ ತಲೆಗೆ ಗುಂಡು ಹಾರಿ ತೀವ್ರ ಗಾಯಗೊಂಡಿದ್ದರೂ ಬದುಕುಳಿದಿದ್ದರು. 

Share this Story:

Follow Webdunia kannada