Select Your Language

Notifications

webdunia
webdunia
webdunia
webdunia

ತಾಲಿಬಾನ್ ಮುಖಂಡ ಮುಲ್ಲಾ ಓಮರ್ ಫಿನಿಷ್

ತಾಲಿಬಾನ್ ಮುಖಂಡ ಮುಲ್ಲಾ ಓಮರ್ ಫಿನಿಷ್
ಇಸ್ಲಾಮಾಬಾದ್ , ಬುಧವಾರ, 29 ಜುಲೈ 2015 (16:02 IST)
ಭಯೋತ್ಪಾದನೆ ಸಂಘಟನೆ ತಾಲಿಬಾನ್ ಮುಖಂಡ ಮುಲ್ಲಾ ಓಮರ್  2013ರಲ್ಲೇ  ಮೃತಪಟ್ಟಿದ್ದಾನೆಂದು ಆಫ್ಘನ್ ಸರ್ಕಾರಿ ಮೂಲಗಳು ಹೇಳಿವೆ. ಆದಾಗ್ಯೂ, ತಾಲಿಬಾನ್ ಮುಲ್ಲಾ ಓಮರ್ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಬಿಬಿಸಿ ಹೇಳಿದೆ. ಕ್ವೆಟ್ಟಾದಿಂದ ಉತ್ತರವಜಿರಿಸ್ಥಾನಕ್ಕೆ ಬರುತ್ತಿದ್ದ ಮುಲ್ಲಾ ಓಮರ್‌ನನ್ನು ಹತ್ಯೆ ಮಾಡಲಾಗಿದೆ.  
 
ಸಂಘಟನೆಯು ಸದ್ಯದಲ್ಲೇ ಹೇಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ವೆಬ್‌ಸೈಟ್‌ನಲ್ಲಿನ ವರದಿಯಲ್ಲಿ ತಿಳಿಸಿದೆ. ಒಕ್ಕಣ್ಣಿನ ಹೋರಾಟಗಾರ ಮುಲ್ಲಾ ಓಮರ್ ತಾಲಿಬಾನ್ ಸುಪ್ರೀಂ ಕಮಾಂಡರ್ ಮತ್ತು ಧಾರ್ಮಿಕ ನಾಯಕನಾಗಿದ್ದ. ಒಸಾಮಾ ಬಿನ್ ಲಾಡೆನ್‌ಗೆ ಮುಲ್ಲಾ ಓಮರ್ ನಿಕಟವರ್ತಿಯಾಗಿದ್ದ.  ಕಳೆದ  13 ವರ್ಷಗಳಿಂದ ಮುಲ್ಲಾ ಓಮರ್ ಸಾರ್ವಜನಿಕ ದೃಷ್ಟಿಯಿಂದ ದೂರವಿದ್ದ. 
 
ಕಳೆದ ಏಪ್ರಿಲ್‌ನಲ್ಲಿ ಆಫ್ಘನ್ ತಾಲಿಬಾನ್ ಅಚ್ಚರಿಯ ಕ್ರಮವಾಗಿ ತಮ್ಮ ವರ್ಚಸ್ವೀ ನಾಯಕ ಮುಲ್ಲಾ ಓಮರ್‌ನ ವಿವರಣಾತ್ಮಕ ಜೀವನಚರಿತ್ರೆಯನ್ನು ಪ್ರಕಟಿಸಿತ್ತು. ತಮ್ಮ  ಸಂಘಟನೆಯ ಉಗ್ರರ ಮೇಲೆ ಇಸ್ಲಾಮಿಕ್ ಸ್ಟೇಟ್ ಪ್ರಭಾವವನ್ನು ಪ್ರತಿರೋಧಿಸುವುದಕ್ಕಾಗಿ ತಾಲಿಬಾನ್ ಈ ಕ್ರಮಕ್ಕೆ ಮುಂದಾಗಿತ್ತು.

ಇತ್ತೀಚಿನ ತಿಂಗಳಲ್ಲಿ ಉಗ್ರರು ಇಸ್ಲಾಮಿಕ್ ಸ್ಟೇಟ್‌ಗೆ ಪಕ್ಷಾಂತರ ಮಾಡಿದ್ದನ್ನು ತಾಲಿಬಾನ್ ಕಂಡಿತ್ತು. ಕೆಲವು ಉಗ್ರರು 2001ರಲ್ಲಿ ಅಮೆರಿಕದ ದಾಳಿ ಬಳಿಕ ನಾಪತ್ತೆಯಾದ ಮುಲ್ಲಾ ಓಮರ್ ಬಗ್ಗೆ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದರು. 
 

Share this Story:

Follow Webdunia kannada