Webdunia - Bharat's app for daily news and videos

Install App

ಕಂದಮ್ಮಗಳನ್ನು ಆತ್ಮಹತ್ಯಾ ಬಾಂಬರ್‌ಗಳನ್ನಾಗಿಸುತ್ತಿದ್ದಾರೆ ಅಪ್ಪ- ಅಮ್ಮ

Webdunia
ಶುಕ್ರವಾರ, 23 ಡಿಸೆಂಬರ್ 2016 (11:00 IST)
ತಮ್ಮಿಬ್ಬರು ಪುಟ್ಟ ಪುಟ್ಟ ಕಂದಮ್ಮಗಳನ್ನು ತಂದೆ-ತಾಯಿಯೇ ಆತ್ಮಹತ್ಯಾ ಬಾಂಬರ್‌ಗಳಾಗಲು ಸಿದ್ಧಗೊಳಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 

ವಿಡಿಯೋದಲ್ಲಿ ಸಿರಿಯನ್ ತಂದೆ-ತಾಯಿ ತಮ್ಮ 7 ಮತ್ತು 9 ವರ್ಷದ ಹೆಣ್ಣುಮಕ್ಕಳಿಗೆ ಜಿಹಾದ್ ಸುಸೈಡ್ ಕಾರ್ಯಾಚರಣೆಗೆ ಸಿದ್ಧಗೊಳಿಸುತ್ತಿರುವುದು ಸ್ಪಷ್ಟವಾಗಿದೆ. 
 
ವಿಡಿಯೋ ಫೂಟೇಜ್‌ನಲ್ಲಿ ತಂದೆ ತನ್ನಿಬ್ಬರು ಹೆಣ್ಣುಮಕ್ಕಳಿಗೆ ನೀವು ಇಂದೇನು ಮಾಡಲಿದ್ದೀರಿ? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಒಬ್ಬ ಮಗಳು ಹೀಗೆ ಉತ್ತರಿಸುತ್ತಾಳೆ,"ನಾನಿಂದು ಡೆಮಾಸ್ಕಸ್‌ನಲ್ಲಿ ಆತ್ಮಹತ್ಯಾ ಕಾರ್ಯಾಚರಣೆಯನ್ನು ನಡೆಸುತ್ತೇನೆ".
 
ನಿಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಆತ್ಮಹತ್ಯಾ ಮಿಷನ್‌ಗೆ ಏಕೆ ಕಳುಹಿಸಿತ್ತೀರಿ ಎಂದು ಕೇಳಲಾಗಿ, ಜಿಹಾದ್‌ಗೆ ಪ್ರಶ್ನೆ ಬಂದರೆ ಇಲ್ಲಿ ವಯಸ್ಸಿನ ಪ್ರಶ್ನೆ ಬರುವುದಿಲ್ಲ. ಈಗ ಜಿಹಾದ್ ಪ್ರತಿಯೊಬ್ಬ ಮುಸ್ಲಿಂ‌ಮರ ಕರ್ತವ್ಯವಾಗಿದೆ ಎಂದುತ್ತರಿಸುತ್ತಾರೆ ಆ ನತದೃಷ್ಟ ಮಕ್ಕಳ ತಾಯಿ.
 
ಭಯಪಡುವ ಅಗತ್ಯವಿಲ್ಲ, ನೀವು ದೇವರ ಬಳಿ ಹೋಗುತ್ತಿದ್ದೀರಿ, ಅಲ್ಲಾಹೋ ಅಕ್ಬರ್ ಎನ್ನಿ ಎಂದು ತಂದೆ ತನ್ನ ಪುತ್ರಿಯರಿಗೆ ಹೇಳುತ್ತಿರುವುದು ಕೂಡ ವಿಡಿಯೋದಲ್ಲಿ ಕೇಳಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments