Select Your Language

Notifications

webdunia
webdunia
webdunia
webdunia

ಮ್ಯಾನ್ಮಾರ್ ಅಧ್ಯಕ್ಷೀಯ ಚುನಾವಣೆ ಕಣದಲ್ಲಿ ಸೂಕಿ ನಿಷ್ಠ ಹಟಿನ್ ಕೈವ್

ಮ್ಯಾನ್ಮಾರ್ ಅಧ್ಯಕ್ಷೀಯ ಚುನಾವಣೆ ಕಣದಲ್ಲಿ ಸೂಕಿ ನಿಷ್ಠ ಹಟಿನ್ ಕೈವ್
ಮ್ಯಾನ್ಮಾರ್ , ಶುಕ್ರವಾರ, 11 ಮಾರ್ಚ್ 2016 (14:31 IST)
ಆಂಗ್ ಸಾನ್ ಸೂಕಿ ಅವರ ಬಹುಕಾಲದ ಆಪ್ತ ಹಟಿನ್ ಕೈವ್ ಅವರು ಮ್ಯಾನ್ಮಾರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಶುಕ್ರವಾರ ದೃಢಪಟ್ಟಿದ್ದು, ಸಂಸದೀಯ ಮತದಾನದಲ್ಲಿ ಮೂವರು ಅಂತಿಮ ಅಭ್ಯರ್ಥಿಗಳ ಪೈಕಿ ಹಟಿನ್ ಕೈವ್ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಹಟಿನ್ ಕೈವ್ ಅವರನ್ನು ಸಂಸತ್ತಿನ ಕೆಳಮನೆಯಲ್ಲಿ 274-29 ಮತಗಳಿಂದ ಅಧ್ಯಕ್ಷೀಯ ಚುನಾವಣೆಗೆ ಫೈನಲಿಸ್ಟ್ ಅಭ್ಯರ್ಥಿಯಾಗಿ ಅನುಮೋದಿಸಲಾಯಿತು. 
 
ಎರಡನೇ ಎನ್‌ಎಲ್‌ಡಿ ಅಭ್ಯರ್ಥಿ ಹೆನ್ರಿ ವಾನ್ ಟಿಯೊ ಅವರನ್ನು 148-13 ಮತಗಳಿಂದ ಎರಡನೇ ಫೈನಲಿಸ್ಟ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.  ಮೂರನೇ ಅಭ್ಯರ್ಥಿಯನ್ನು ಮಿಲಿಟರಿ ಬ್ಲಾಕ್ ಮುಂದಿಡುತ್ತದೆ. ಸಂಸತ್ತಿನಲ್ಲಿ ಅದಕ್ಕೆ ಶೇ. 25ರಷ್ಟು ಮೀಸಲಾತಿ ಸೀಟುಗಳು ನಿಗದಿಯಾಗಿದೆ.
 
ಸಂಸತ್ತಿನ ಉಭಯ ಸದನಗಳ ಸದಸ್ಯರು ಅಂತಿಮ ಅಧ್ಯಕ್ಷರ ಆಯ್ಕೆಗೆ ಇನ್ನೊಂದು ಸುತ್ತಿನ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. 70 ವರ್ಷದ ಹಟಿನ್ ಕೈವ್ ಅವರ ಆಯ್ಕೆ ಬಹುಮಟ್ಟಿಗೆ ಖಚಿತವಾಗಿದ್ದು, ಇನ್ನುಳಿದ ಇಬ್ಬರು ಉಪಾಧ್ಯಕ್ಷರಾಗಲಿದ್ದಾರೆ. 
 
ನವೆಂಬರ್ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷವು ಭರ್ಜರಿ ಜಯ ಗಳಿಸಿದ್ದು, ಉಭಯ ಸದನಗಳಲ್ಲಿ ಬಹುಮತದ ಸದಸ್ಯರನ್ನು ಹೊಂದಿದೆ. ಇದರಿಂದ 1962ರಲ್ಲಿ ಮಿಲಿಟರಿ ದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ದೇಶದ ಮೊದಲ ಪ್ರಜಾಪ್ರಭುತ್ವ ಆಯ್ಕೆಯ ಸರ್ಕಾರಕ್ಕೆ ದಾರಿ ಕಲ್ಪಿಸಿದೆ.  ನೂತನ ಅಧ್ಯಕ್ಷರು ಏಪ್ರಿಲ್ ಒಂದರಂದು ಅಧಿಕಾರ ಸ್ವೀಕರಿಸಲಿದ್ದು, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗೆ ಹಟಿನ್ ಕೈವ್ ಸೂಕಿಗೆ ಪರೋಕ್ಷವಾಗಿ ನಿಂತು ಕಾರ್ಯನಿರ್ವಹಿಸಲಿದ್ದಾರೆ. 
 

Share this Story:

Follow Webdunia kannada