Select Your Language

Notifications

webdunia
webdunia
webdunia
webdunia

ನೇಪಾಳ: 21 ಪ್ರಯಾಣಿಕರಿದ್ದ ಲಘುವಿಮಾನ ನಾಪತ್ತೆ

ನೇಪಾಳ: 21 ಪ್ರಯಾಣಿಕರಿದ್ದ ಲಘುವಿಮಾನ ನಾಪತ್ತೆ
ಕಠ್ಮಂಡು , ಬುಧವಾರ, 24 ಫೆಬ್ರವರಿ 2016 (11:16 IST)
ನೇಪಾಳದಲ್ಲಿ ಲಘು ವಿಮಾನವೊಂದು ಟೇಕ್ ಆಪ್ ಆದ ಕೆಲವೇ ಕ್ಷಣಗಳಲ್ಲಿ ನಾಪತ್ತೆಯಾಗಿದೆ. 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪ್ರೋಖ್ರಾ ವಿಮಾನ ನಿಲ್ದಾಣದಿಂದ ಜೋಮ್‌ಸೋಮ್‌ಗೆ ತೆರಳುತ್ತಿತ್ತು. ಮುಂಜಾನೆ 7.45ಕ್ಕೆ ಪ್ರಯಾಣವನ್ನು ಆರಂಭಿಸಿತ್ತು.

ತಾರಾ ವಾಯು ಸಂಸ್ಥೆಗೆ ಸೇರಿದ ನಿಮಾನ ಹಾರಾಟ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದು ಪತನವಾಗಿದೆಯೇ ಅಥವಾ ಮತ್ತೆನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. 
 
ವಿಮಾನ ನಾಪತ್ತೆಯಾದ ಪ್ರದೇಶ ಹಿಮಾಲಯ ಪರ್ವತ ಶ್ರೇಣಿಗಳಿಂದ ಕೂಡಿದ ಪ್ರದೇಶವಾಗಿರುವುದರಿಂದ ಶೋಧ ಕಾರ್ಯವೂ ಸಹ ದುಸ್ತರವಾಗಲಿದೆ. ನೇಪಾಳ ಸೇನಾಪಡೆಗಳು ಹೆಲಿಕಾಪ್ಟರ್ ಗಳ ಮೂಲಕ ವಿಮಾನದ ಪತ್ತೆಕಾರ್ಯ  ಆರಂಭಿಸಿದ್ದಾರೆ.

Share this Story:

Follow Webdunia kannada