Webdunia - Bharat's app for daily news and videos

Install App

ಬುದ್ಧಿ ಕಲಿಯದ ಪಾಕ್: ಮತ್ತೆ ಗಡಿ ಗ್ರಾಮಗಳ ಮೇಲೆ ದಾಳಿ, ಯೋಧ ಸಾವು

Webdunia
ಗುರುವಾರ, 27 ಅಕ್ಟೋಬರ್ 2016 (15:42 IST)

ಕಾಶ್ಮೀರ: ಸರ್ಜಿಕಲ್ ದಾಳಿಯಿಂದಲೂ ಪಾಠ ಕಲಿಯದ ಪಾಕ್ ಸೈನಿಕರು, ಪದೇ ಪದೇ ಕಾಲು ಕೆದರಿಕೊಂಡು ಕಾದಾಟಕ್ಕೆ ಬರುತ್ತಿದ್ದಾರೆ. ಅದೇ ರೀತಿ ಬುಧವಾರ ಇಡೀ ರಾತ್ರಿ ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿನ ಹಲವು ಗ್ರಾಮಗಳ ಮೇಲೆ ಹಾಗೂ ಸೇನಾ ನೆಲೆಯ ಮೇಲೆ ಗುಂಡಿನ ದಾಳಿ ನಡೆಸಿ, ಒಬ್ಬ ಯೋಧನನ್ನು ಹತ್ಯೆಗೈದಿದೆ. ಇತರೆಡೆ ನಡೆದ ದಾಳಿಯಲ್ಲಿ ಹದಿನಾರು ಜನ ತೀವ್ರ ಗಾಯಗೊಂಡಿದ್ದಾರೆ.
 


 

ಜಮ್ಮುವಿನ ಆರ್.ಎಸ್. ಪುರ ಹಾಗೂ ಅರ್.ಎನ್. ವಲಯದ ಸುತ್ತಮುತ್ತ ಪಾಕಿಸ್ತಾನ ಸೈನಿಕರು ಇಡೀ ರಾತ್ರಿ ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ದಾಳಿ ನಡೆಸಿದ್ದಾರೆ. ಮುಂದುವರಿದು ಪಾಕಿಸ್ತಾನ ಸೈನಿಕರು ಸಣ್ಣ ಪ್ರಮಾಣದ ಫಿರಂಗಿ ದಾಳಿಯನ್ನು ನಡೆಸಿದ್ದು, ಅದು ಮುಂಜಾನೆವರೆಗೂ ಮುಂದುವರಿದಿತ್ತು. ಜಮ್ಮು ಜಿಲ್ಲೆಯ ಅಬ್ದುಲಿನ ವಲಯದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನೋರ್ವ ವೃತಪಟ್ಟಿರುವುದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಗ್ರಾಮಗಳ ಮೇಲೆ ನಡೆದ ದಾಳಿಯಲ್ಲಿ ಹದಿನಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲ ಬಹುತೇಕ ಮಹಿಳೆಯರೇ ಆಗಿದ್ದಾರೆ.

 

ಪಾಕಿಸ್ತಾನ ಪಡೆ ಬುಧವಾರ ರಾತ್ರಿ 8.35ರ ವೇಳೆ ಗಡಿ ಪ್ರದೇಶದ ಸಣ್ಣ ಹಳ್ಳಿಗಳನ್ನು ಹಾಗೂ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿತ್ತು ಎಂದು ಬಿ.ಎಸ್.ಎಫ್ ಅಧಿಕಾರಿ ತಿಳಿಸಿದ್ದಾರೆ. ದಾಳಿ ನಡೆದಿರುವ ಕುರಿತು ಜಮ್ಮ ಕಾಶ್ಮೀರದ ಜಿಲ್ಲಾಧಿಕಾರಿ ಸಿಮ್ರಾನ್ ದೀಪ್ ಅವರು ಖಚಿತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments