Select Your Language

Notifications

webdunia
webdunia
webdunia
webdunia

ಆಘಾತಕಾರಿ ಐಸಿಸ್ ವೀಡಿಯೊ: 10 ವರ್ಷದ ಬಾಲಕನಿಂದ ಒತ್ತೆಯಾಳು ಶಿರಚ್ಛೇದ

ಆಘಾತಕಾರಿ ಐಸಿಸ್ ವೀಡಿಯೊ: 10 ವರ್ಷದ ಬಾಲಕನಿಂದ ಒತ್ತೆಯಾಳು ಶಿರಚ್ಛೇದ
ನವದೆಹಲಿ , ಶುಕ್ರವಾರ, 5 ಫೆಬ್ರವರಿ 2016 (12:45 IST)
ಜಗತ್ತಿನಾದ್ಯಂತ ಭಯವನ್ನು ಸೃಷ್ಟಿಸಿರುವ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಒತ್ತೆಯಾಳುಗಳ ತಲೆ ಕತ್ತರಿಸುವ ಭಯಾನಕ ವಿಡಿಯೋ ಬಿಡುಗಡೆ ಮಾಡುವುದು ಹೊಸ ಸುದ್ದಿಯೇನಲ್ಲ. ಆದರೆ ಇಂಗ್ಲೀಷ್ ಮಾತನಾಡುತ್ತಿರುವ 10 ವರ್ಷದ ಬಾಲಕನೊಬ್ಬ ಒತ್ತೆಯಾಳುವನ್ನು ಕೊಲ್ಲುತ್ತಿರುವ ಆಘಾತಕಾರಿ, ಬೀಭತ್ಸ ವಿಡಿಯೋವೊಂದನ್ನು ಐಸಿಸ್ ಬಿಡುಗಡೆ ಮಾಡಿದ್ದು ಈ ಮೂಲಕ ಅಮೇರಿಕಕ್ಕೆ ಎಚ್ಚರಿಕೆ ನೀಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವ ಪುಟ್ಟ ಬಾಲಕ ದೊಡ್ಡದಾದ ಹರಿತ ಚಾಕುವಿನಿಂದ ಒತ್ತೆಯಾಳುವಿನ ತಲೆಯನ್ನು ಕತ್ತರಿಸಿದ್ದಾನೆ ಮತ್ತು "ಇಸ್ಲಾಮ್‌ನ ಶರಿಯಾ ವಿರುದ್ಧ ಹೋರಾಡುವುದಕ್ಕೆ ನೀವು ಕಳುಹಿಸಿದ ಸೈನಿಕರಿವರು. ಇಸ್ಲಾಮ್ ಶರಿಯಾವನ್ನು ಕೊನೆಗಾಣಿಸಲು ಸೈನಿಕರನ್ನು ಕಳುಹಿಸುತ್ತಿರುವ ಮತ್ತು ಅವರಿಗೆ ಶಸ್ತ್ರಾಸ್ತ್ರ ಒದಗಿಸಲು ಹಣ ಖರ್ಚು ಮಾಡುತ್ತಿರುವ ಅಮೆರಿಕ, ನಿನಗಿದೋ ಎಚ್ಚರಿಕೆ",ಎಂದು ಗುಡುಗಿದ್ದಾನೆ. 
 
ದಾಬಿಕ್‌ನಲ್ಲಿ ಐಸಿಸ್‌ ತನ್ನ ಶತ್ರುಗಳನ್ನು ಈ ರೀತಿ ಮುಗಿಸುತ್ತದೆ ಎಂದು ಉಗ್ರ ಹುಡುಗ ಹೇಳುತ್ತಿರುವುದು ವಿಡಿಯೋದಲ್ಲಿದೆ. ದಾಬಿಕ್‌ ಸಿರಿಯಾದಲ್ಲಿರುವ ಪುಟ್ಟ ಪಟ್ಟಣವಾಗಿದೆ. 
 
ಈ ಬಾಲಕ  ಇತ್ತೀಚಿಗೆ ಅಲೆಪ್ಪೋದಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಸಾವನ್ನಪ್ಪಿದ ಅಬು ದರ್ದಾನ ಮಗನೆಂದು ಶಂಕಿಸಲಾಗಿದೆ.
 
ಬಾಲಕನಿಂದ ಕೊಲೆಯಾದ ಒತ್ತೆಯಾಳುವಿನ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿದ್ದು, ಆತ ಕಿತ್ತಳೆ ಬಣ್ಣದ ಜಂಪ್‌ ಸೂಟ್‌ನಲ್ಲಿದ್ದಾನೆ. ಆತ ಲೆವಾಂಟ್‌ ಫ್ರಂಟ್‌ನ ಬಂಡಾಯ ಬಣದವನಾಗಿದ್ದಾನೆ ಎಂದು ಹೇಳಲಾಗುತ್ತಿದೆ.
 
ಹದಿನೇಳು ನಿಮಿಷಗಳ ಈ ವಿಡಿಯೋದಲ್ಲಿ ಬಾಲಕ ಒತ್ತೆಯಾಳುವನ್ನು ಕಾಡಿನಿಂದ ಎಳೆದುಕೊಂಡು ಬಂದು ಕ್ಯಾಮರಾದ ಮುಂದೆ ಮಂಡಿಯೂರಿ ಕುಳಿತುಕೊಳ್ಳುವಂತೆ ಬಲವಂತ ಪಡಿಸುತ್ತಿದ್ದಾನೆ. ಅದಕ್ಕೆ ಮುಂದಿನ ದೃಶ್ಯದಲ್ಲಿ ಉದ್ದನೆಯ ಚಾಕಿವಿನಿಂದ ಅವನ ಶಿರಚ್ಛೇದನ ಮಾಡುತ್ತಾನೆ.

Share this Story:

Follow Webdunia kannada