Webdunia - Bharat's app for daily news and videos

Install App

ಸೌದಿ ವಿರುದ್ಧ ದಾವೆಗೆ ಅವಕಾಶ ನೀಡುವ ಮಸೂದೆಗೆ ಸೆನೆಟ್ ಅಸ್ತು

Webdunia
ಬುಧವಾರ, 18 ಮೇ 2016 (16:21 IST)
ಸೆಪ್ಟೆಂಬರ್ 11ರ ದಾಳಿಯ ಬಲಿಪಶುಗಳ ಕುಟುಂಬಗಳು ತಮಗುಂಟಾದ ಹಾನಿಗಾಗಿ ಸೌದಿ ಅರೇಬಿಯಾ ಸರ್ಕಾರದ ಮೇಲೆ ದಾವೆ ಹೂಡುವುದಕ್ಕೆ ಅವಕಾಶ ನೀಡುವ ಶಾಸನಕ್ಕೆ ಅಮೆರಿಕ ಸೆನೆಟ್ ಮಂಗಳವಾರ ಅನುಮೋದನೆ ನೀಡಿದೆ. ಇದರಿಂದ ಅಮೆರಿಕ ಸೆನೆಟ್ ಶ್ವೇತಭವನದ ಜತೆ ಜಟಾಪಟಿಗೆ ಇಳಿದಿದ್ದು, ಶ್ವೇತಭವನ ಈ ಶಾಸನದ ವಿರುದ್ಧ ವಿಟೊ ಹಕ್ಕು ಚಲಾಯಿಸುವುದಾಗಿ ಬೆದರಿಸಿದೆ. 
 
2001ರ ದಾಳಿಗಳಿಗೆ ತಾವು ಹೊಣೆಯಲ್ಲ ಎಂದು  ಸೌದಿಗಳು ನಿರಾಕರಿಸುತ್ತಿದ್ದು ಈ ಮಸೂದೆಯನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಈ ಮಸೂದೆ ಕಾನೂನಾದರೆ  ಅಮೆರಿಕದ ಸಾಲಪತ್ರಗಳು ಮತ್ತಿತರ ಅಮೆರಿಕ ಆಸ್ತಿಗಳು ಸೇರಿದಂತೆ 750 ಶತಕೋಟಿ ಡಾಲರ್ ಮಾರಾಟ ಮಾಡುವುದಾಗಿ ಸೌದಿ ಬೆದರಿಸಿದೆ.
 
ಭಯೋತ್ಪಾದಕ ಕೃತ್ಯದ ಪ್ರಾಯೋಜಕರ ವಿರುದ್ಧ ನ್ಯಾಯ ಅಥವಾ ಜಾಸ್ಟಾ ಸರ್ವಾನುಮತದ ಧ್ವನಿಮತದಿಂದ ಸೆನೆಟ್‌ನಲ್ಲಿ ಅಂಗೀಕಾರಗೊಂಡಿತು.  ಇದನ್ನು ಅಮೆರಿಕ ಪ್ರಾತಿನಿಧಿಕ ಸದನದಲ್ಲಿ ಮುಂದೆ ಪ್ರಸ್ತಾಪಿಸಲಾಗುತ್ತದೆ ಮತ್ತು ನ್ಯಾಯಾಂಗ ಸಮಿತಿಯು ಈ ಕುರಿತು ವಿಚಾರಣೆ ನಡೆಸುತ್ತದೆ ಎಂದು ಸಮಿತಿ ಹೇಳಿದೆ. 
 
ಇದು ಕಾನೂನಾಗಿ ಪರಿವರ್ತನೆಯಾದರೆ ಅಮೆರಿಕದ ನೆಲದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಒಳಗೊಂಡಿರುವ ದೇಶಗಳ ವಿರುದ್ಧ ದಾವೆಗಳಿಗೆ ತಡೆನೀಡುವ ಸಾರ್ವಬೌಮ ರಕ್ಷಣೆಯನ್ನು ಜಾಸ್ಟಾ ತೆಗೆದುಹಾಕುತ್ತದೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಆಮೇಲೆ, ಮೊದಲು ಇವರನ್ನು ಮೀಟ್ ಮಾಡಲಿರುವ ಸಿಎಂ, ಡಿಸಿಎಂ

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರು: ಉಗ್ರ ನಾಸಿರ್ ಜೈಲಿನಿಂದ ಪರಾರಿಯಾಗಲು ನಡೆದಿತ್ತು ಖತರ್ನಾಕ್ ಪ್ಲ್ಯಾನ್

ಹೃದಯಾಘಾತಕ್ಕೆ ತಿಂಗಳ ಮುಂಚೇ ಸಿಗುವ ಮುನ್ಸೂಚನೆಗಳೇನು: ಡಾ ಸಿಎನ್ ಮಂಜುನಾಥ್

ಮುಂದಿನ ಸುದ್ದಿ
Show comments