Select Your Language

Notifications

webdunia
webdunia
webdunia
webdunia

ಪೋಟೋ ಕ್ಲಿಕ್ಕಿಸಿದ್ದಕ್ಕೆ ಮುತ್ತು ಕೊಡುವ ಶಿಕ್ಷೆ

ಪೋಟೋ ಕ್ಲಿಕ್ಕಿಸಿದ್ದಕ್ಕೆ ಮುತ್ತು ಕೊಡುವ ಶಿಕ್ಷೆ
ಪ್ಯಾರಿಸ್ , ಶನಿವಾರ, 1 ಅಕ್ಟೋಬರ್ 2016 (10:42 IST)
ಸೌಧಿ ಅರೇಬಿಯಾದಲ್ಲಿ ಬಳಕೆಯಲ್ಲಿರುವ ಶರಿಯಾ ಕಾನೂನಿನ ಉಗ್ರ ಶಿಕ್ಷೆಗಳ ಬಗ್ಗೆ ನೀವು ಕೇಳಿಯೇ ಇರುತ್ತೀರ. ಅದೇ ಸೌಧಿಯ ರಾಜಮನೆತನಕ್ಕೆ ಸೇರಿದ ಯುವರಾಣಿಯೊಬ್ಬಳು ತಮ್ಮ ಅರಮನೆಯಲ್ಲಿ ಕೆಲಸಕ್ಕೆ ಬಂದಿದ್ದ ಇಂಟಿರೀಯರ್ ಡೆಕೋರೇಟರ್‌ಗೆ ಛಡಿಯೇಟು ಮತ್ತು ತನ್ನ ಪಾದವನ್ನು ಚುಂಬಿಸುವ ಶಿಕ್ಷೆ ಕೊಟ್ಟಿದ್ದಾಳೆ. ಅದು ಯಾಕೆ ಗೊತ್ತೇ? ಕೇವಲ ಬಂಗಲೆ ಪೋಟೋ ತೆಗೆದಿದ್ದಕ್ಕೆ.
ಸೌಧಿಯ ಮಾಜಿ ದೊರೆ ಖಾಲಿದ್ ಬಿನ್ ಅಬ್ಲುಲಾಜಿಜ್ ಅಲ್ ಸೌಧ್ ಸಂಬಂಧಿ ಯುವತಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಾಳೆ. ಇತ್ತೀಚಿಗೆ ಅಲ್ಲಿ ಇಂಟಿರೀಯರ್ ಡೆಕೋರೇಶನ್ ಮಾಡಲು ಬಂದಿದ್ದ ಯುವಕನೊಬ್ಬ ಬಂಗಲೆಯೊಳಗೆ ಫೋಟೋ ಕ್ಲಿಕ್ಕಿಸಿದ್ದಾನೆ.
 
ಇದರಿಂದ ಸಿಟ್ಟಿಗೆದ್ದ ಯುವರಾಣಿ ಆತನಿಗೆ ಥಳಿಸುವಂತೆ  ಆದೇಶಿಸಿದ್ದಾಳೆ. ಜತೆಗೆ ಆತನ ಕೈಗಳನ್ನು ಕಟ್ಟಿ ತನ್ನ ಪಾದವನ್ನು ಚುಂಬಿಸುವಂತೆ ಆದೇಶಿಸಿದ್ದಾಳೆ. 
 
ಬಳಿಕ ಆತ ಮಾಡಿದ ಕೆಲಸಕ್ಕೆ ವೇತನವನ್ನು ಸಹ ನೀಡದೆ ಹೊರಕ್ಕೆ ಕಳುಹಿಸಿ ದರ್ಪ ತೋರಿಸಲಾಗಿದೆ. 
 
ಆಕೆ ಆತನನ್ನು ಕೊಲ್ಲಲು ಆದೇಶಿಸಿದ್ದಾಳೆ ಎಂದು ಸಹ ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಚಚ್ಚಿದ್ದ ಕಂಡಕ್ಟರ್‌ಗೆ ನಿಮ್ಹಾನ್ಸ್‌ನಲ್ಲಿ ಆರೋಗ್ಯ ತಪಾಸಣೆ